ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಇಂದು ನಸುಗಿನ ಜಾವ 1.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮನೆಗೆ ಆಧಾರವಾಗಿದ್ದ ಮಗ ಇಲ್ಲವಾಗಿದ್ದಾನೆ, ಮನೆಯ ಸಂಸಾರ ಅವನಿಂದಲೇ ನಡೆಯುತ್ತಿತ್ತು ಎಂದು ತಂದೆ ರಾಮಣ್ಣ ಮಗ ರವಿಯನ್ನು ನೆನೆದು ದುಃಖ ಪಡುತ್ತಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ರವಿ ಗಾರೆ ಕೆಲಸ ಮಾಡುತ್ತಿದ್ದ ಹಾಗೂ ಅಲ್ಲಲ್ಲಿ ಪೋಸ್ಟರ್ ಹಚ್ಚುವ ಕೆಲಸ ಮಾಡುತ್ತಿದ್ದ. ಮಂಗಳವಾರ ಮನೆಯಲ್ಲಿಯೇ ಇದ್ದ ಊಟ ಮುಗಿದ ಬಳಿಕ ಯಶ್ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದ. ಆಗ ನಾವು ಬೇಡ ಎಂದು ಆತನಿಗೆ ಹೇಳಿದ್ದೇವು. ನಂತರ ಹೋಗುತ್ತೇನೆ ಎಂದು ಮನೆಯಲ್ಲಿ ಇದ್ದ ಆತ ಯಾವಾಗ ಹೋಗಿದ್ದಾನೋ ಗೊತ್ತಿಲ್ಲ. ಆದರೆ ಪೆಟ್ರೋಲ್ ಎಲ್ಲಿ ತಗೆದುಕೊಂಡಿದ್ದಾನೋ ಗೊತ್ತಿಲ್ಲ ಎಂದು ಹೇಳಿದರು.
Advertisement
Advertisement
ತನ್ನ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ವಿಷಯ ತಿಳಿದ ಯಶ್ ಅವರು ಮಂಗಳವಾರ ರಾತ್ರಿ ಆಸ್ಪತ್ರೆಗೆ ಬಂದು ರವಿಯನ್ನು ಭೇಟಿ ಮಾಡಿದ್ದರು. ಈಗ ರವಿ ಯಶ್ ಅವರಿಗೆ ಶೇಕ್ ಹ್ಯಾಂಡ್ ನೀಡಿ ಹ್ಯಾಪಿ ಬರ್ತ್ ಡೇ ಅಣ್ಣ ಎಂದು ವಿಶ್ ಮಾಡಿದ್ದ. ಆಗ ಯಶ್ ಏನು ಅಗಲ್ಲ ಅಂತ ಅವನಿಗೆ ಹೇಳಿದ್ದರು. ನಮಗೂ ಏನು ಅಗಲ್ಲ ಅಂತ ಯಶ್ ಧೈರ್ಯ ಹೇಳಿದ್ದರು. ಆದರೆ ರವಿ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ತಂದೆ ರಾಮಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಯಶ್ ಭೇಟಿಗೆ ಅವಕಾಶ ಸಿಗದ್ದಕ್ಕೆ ಮನೆ ಮುಂದೆ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ
Advertisement
Advertisement
ರವಿ ‘ಕೆಜಿಎಫ್’ ಸಿನಿಮಾ ನೋಡುವುದ್ದಕ್ಕೆ ನಾಲ್ಕು ಟಿಕೆಟ್ ಬುಕ್ ಮಾಡಿದ್ದ. ಅವನು ಅವರ ಅಮ್ಮ ಹಾಗೂ ನನ್ನನ್ನು ಕರೆದುಕೊಂಡು ಹೋಗುತ್ತೇನೆ ಬನ್ನಿ ಎಂದು ಹೇಳಿದ್ದ. ಆಗ ನಾವು ಬೇಡ ಜನ ಜಾಸ್ತಿ ಇರುತ್ತಾರೆ. ಇನ್ನೊಮ್ಮೆ ಹೋಗೋಣ ಎಂದು ಹೇಳಿದ್ದೇವು. ಆಗ ಆತ ತನ್ನ ಸ್ನೇಹಿತರನ್ನು ಕರೆದುಕೊಂಡು ಹೋಗಿ ಸಿನಿಮಾವನ್ನು ನೋಡಿಕೊಂಡು ಬಂದಿದ್ದ ಎಂದು ಹೇಳಿದರು. ಇದನ್ನೂ ಓದಿ: ಇದೇ ಕೊನೆ, ನನ್ನ ಅಭಿಮಾನಿಗಳು ಯಾರೇ ಹೀಗೆ ಮಾಡ್ಕೊಂಡ್ರೆ ನಾನು ಮತ್ತೆ ಬರಲ್ಲ: ಕೈ ಮುಗಿದು ಯಶ್ ಮನವಿ
ಪ್ರತಿ ವರ್ಷ ಯಶ್ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದನು. ಅಲ್ಲದೇ ಕಳೆದ ವರ್ಷ ನಮ್ಮನ್ನು ಯಶ್ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ. ನಾವು ಹೊರಗಡೆ ನಿಂತು ಯಶ್ ಅವರನ್ನು ನೋಡಿ ಅಲ್ಲಿಂದ ಹೊರಟು ಹೋಗಿದ್ದೇವು. ನನ್ನ ಕಾಲು ಸರಿಯಿಲ್ಲದ ಕಾರಣ ಎಲ್ಲೂ ಕೆಲಸಕ್ಕೆ ಹೋಗುತ್ತಿಲ್ಲ. ನನಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಮದುವೆಯಾಗಿ ಬೇರೆ ಹೋಗಿದ್ದಾನೆ. ಮನೆಗೆ ಆಧಾರವಾಗಿದ್ದ ಮಗ ಇಲ್ಲವಾಗಿದ್ದಾನೆ. ಮನೆಯ ಸಂಸಾರ ರವಿಯಿಂದಲೇ ನಡೆಯುತ್ತಿತ್ತು ಎಂದು ದು:ಖ ತೋಡಿಕೊಂಡರು.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರವಿ ಪ್ರಕರಣವನ್ನು ಅಸಹಜ ಸಾವು ಅಡಿಯಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು..!
https://www.youtube.com/watch?v=_RZyZvDggRU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv