ವಾಷಿಂಗ್ಟನ್: ವ್ಯಕ್ತಿಯೊಬ್ಬ ಯುವತಿಯ ಹಿಂಭಾಗ ಟಚ್ ಮಾಡಿ ಒದೆ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಅಮೆರಿಕಾದ ರೆಸ್ಟೋರೆಂಟ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರೆಸ್ಟೋರೆಂಟ್ ಪ್ರವೇಶ ದ್ವಾರದಲ್ಲಿ ಮಹಿಳಾ ವೇಟರ್ ತನ್ನ ಕೆಲಸದಲ್ಲಿ ತೊಡಗಿದ್ದಳು. ರಾಯನ್ ಚರ್ವಿಂಸಕಿ ಹೆಸರಿನ ವ್ಯಕ್ತಿಯೊಬ್ಬ ಯುವತಿಗೆ ಹಿಂಬದಿಗೆ ಹೊಡೆದು ಮುಂದೆ ಹೋಗಿದ್ದಾನೆ. ವ್ಯಕ್ತಿಯ ಈ ಅಸಭ್ಯ ವರ್ತನೆಯನ್ನು ಕಂಡ ಯುವತಿ ಕೂಡಲೇ ಆತನ ಟೀ-ಶರ್ಟ್ ಕಾಲರ್ ಹಿಡಿದು ಜೋರಾಗಿ ಎಳೆದುಕೊಂಡು ಬಂದು ಕುರ್ಚಿಯ ಮೇಲೆ ಕೂರಿಸಿದ್ದಾಳೆ. ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
Advertisement
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪುಂಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯನ್ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಊಟ ಮಾಡಲೆಂದು ರೆಸ್ಟೋರೆಂಟ್ಗೆ ಬಂದಿದ್ದನು. ರಾಯನ್ನನ್ನು ಪೊಲೀಸರು ಆತನ ಪತ್ನಿ ಹಾಗೂ ಮಕ್ಕಳ ಮುಂದೆಯೇ ವಶಕ್ಕೆ ಪಡೆದರು. ಸದ್ಯ ರಾಯನ್ನನ್ನು ಎರಡು ದಿನ ಜೈಲಿನಲ್ಲಿರಿಸಿ ನಂತರ ಬಿಟ್ಟು ಕಳುಹಿಸಲಾಗಿದೆ.
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಈ ವಿಡಿಯೋ ನೋಡಿದ ಎಲ್ಲರೂ ಮಹಿಳೆಯ ಧೈರ್ಯವನ್ನು ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
https://www.youtube.com/watch?v=XgPLVNtZPMs