ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ. ಎಲ್ಲ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ವ್ಯಂಗ್ಯವಾಡಿದರು.
ದೆಹಲಿಯ (Delhi) ಕರ್ನಾಟಕ ಭವನದ ಬಳಿ ಮಾಧ್ಯಮಗಳಿಗೆ ಮಂಗಳವಾರ (ಅ.13) ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಸ್ಟಿಂಗ್, ಸಿಡಿ ಸಂಸ್ಕೃತಿ ಹುಟ್ಟುಹಾಕಿದ್ದೇ ಡಿಕೆಶಿ; ಸಚಿವರ ಮೇಲೆಯೇ ಸಿಎಂ ಗೂಢಚಾರಿಕೆ: ಹೆಚ್‌ಡಿಕೆ ಬಾಂಬ್
ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಸ್ಟಿಂಗ್ ಆಪರೇಷನ್ ಹಿಂದೆಯೂ ನೀವೇ ಇದ್ದೀರಿ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ಬಹಳ ಸಂತೋಷ. ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ. ಅವರು ಹೇಳಿದಂತೆ ಅದೇನು ದಾಖಲೆಗಳಿವೆಯೋ ಅದನ್ನು ತರಿಸಿ ಅವರಿಗೆ ತಿಳಿಸುತ್ತೇನೆ. ತನಿಖೆ ಮಾಡಲು ಯಾರಿಗೋ ನೀಡಬೇಕು ಎಂದು ಹೇಳಿದ್ದಾರಲ್ಲ, ಅವರಿಗೆ ದಾಖಲೆಗಳನ್ನು ಕೊಡಲಿ ಎಂದು ತಿರುಗೇಟು ನೀಡಿದರು.

