– ಅಧಿಕ ಕೆಲಸದೊತ್ತಡವೇ ಕಾರಣ ಎಂದು ಅಖಿಲೇಶ್ ಯಾದವ್ ಆರೋಪ
ಲಕ್ನೋ: ಕೆಲಸ ಮಾಡುವಾಗ ಕೂತಿದ್ದ ಕುರ್ಚಿಯಿಂದ ಬಿದ್ದು ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೋದ ವಿಭೂತಿಖಂಡದ (VibhutiKhanda) ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank Branch) ಶಾಖೆಯಲ್ಲಿ ನಡೆದಿದೆ.
ಇತ್ತಿಚೇಗಷ್ಟೇ ಕೆಲಸದ ಒತ್ತಡದಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ
ಮೃತ ಮಹಿಳೆಯನ್ನು 45 ವರ್ಷದ ಸದಾಫ್ ಫಾತಿಮಾ ಎಂದು ಗುರುತಿಸಲಾಗಿದ್ದು, ಲಕ್ನೋದ ವಿಭೂತಿಖಂಡದ ಹೆಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಹೆಚ್ಚುವರಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಿಭೂತಿಖಂಡದ ಸಹಾಯಕ ಪೊಲೀಸ್ ಆಯುಕ್ತ ರಾಧಾರಮಣ ಮಾತನಾಡಿ, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಕಾರಣ ಏನು ಎಂಬುದು ಪರೀಕ್ಷೆಯ ಬಳಿಕ ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಈ ಬೆನ್ನಲ್ಲೇ ಆಕೆಯ ಸಹೋದ್ಯೋಗಿ ಪ್ರತಿಕ್ರಿಯಿಸಿ, ಫಾತಿಮಾ ಕೆಲಸದ ಒತ್ತಡದಲ್ಲಿದ್ದಳು ಎಂದು ತಿಳಿಸಿದ್ದಾರೆ.
लखनऊ में काम के दबाव और तनाव के कारण एचडीएफ़सी की एक महिलाकर्मी की ऑफिस में ही, कुर्सी से गिरकर, मृत्यु का समाचार बेहद चिंतनीय है।
ऐसे समाचार देश में वर्तमान अर्थव्यवस्था के दबाव के प्रतीक हैं। इस संदर्भ में सभी कंपनियों और सरकारी विभागों तक को गंभीरता से सोचना होगा। ये देश के… pic.twitter.com/Xj49E01MSs
— Akhilesh Yadav (@yadavakhilesh) September 24, 2024
ಪ್ರಕರಣದ ಕುರಿತು ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಎಕ್ಸ್ (X) ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ. ದೇಶದ ಪ್ರಸ್ತುತ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳು ಗಂಭೀರವಾಗಿ ಯೋಚಿಸಬೇಕು. ಇದು ದೇಶದ ಮಾನವ ಸಂಪನ್ಮೂಲಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ನಿನ್ನೆ ಬಂದಿರೋದು ಪೊಲಿಟಿಕಲ್ ಜಡ್ಜ್‌ಮೆಂಟ್: ಜಮೀರ್ ಅಹ್ಮದ್