ಬೆಂಗಳೂರು: ಲೋಕಸಭಾ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಜೋಡೆತ್ತುಗಳದ್ದೆ ದರ್ಬಾರ್ ಆಗಿದೆ. ಈ ಜೋಡೆತ್ತು ಕಾಳಗದ ನಡುವೆ ಗೌಡರು-ಸಿದ್ದರಾಮಯ್ಯ ನಿಜವಾದ ಜೋಡೆತ್ತುಗಳಾಗಿದ್ದಾರೆ. ಆದರೆ ಇದೀಗ ಆ ಜೋಡೆತ್ತುಗಳೇ ಬೆದರಿದ್ವಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಹೌದು. ಏ.9ರಂದು ಮೈಸೂರಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪ್ರವಾಸ ಹಮ್ಮಿಕೊಂಡಿದ್ದರು. ಆದರೆ ಅಂದೇ ಮೈಸೂರಲ್ಲಿ ಪ್ರಧಾನಿ ಮೋದಿ ಸಮಾವೇಶ ನಡೆಯಲಿದೆ.
Advertisement
Advertisement
ಮೋದಿ ಬರುತ್ತಿರೋದ್ರಿಂದ ಮಾಜಿ ಪಿಎಂ ಹಾಗೂ ಮಾಜಿ ಸಿಎಂ ಬೆದರಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೈಸೂರಿಗೆ ಹೋಗುವ ಬದಲು ಏ.10ರಂದು ಬೆಂಗಳೂರಿನಲ್ಲಿ ಪ್ರಚಾರ ನಡೆಸಲು ತೀರ್ಮಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಮೋದಿ ಪ್ರಚಾರದ ಮುಂದೆ ನಮ್ಮ ಪ್ರಚಾರ ಡಮ್ಮಿಯಾಗುತ್ತೆ ಎನ್ನುವ ಆತಂಕದಿಂದ ಮೈತ್ರಿ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.