ಹಾಸನ: ಬಂಡಾಯ ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಏಳು ಮಂದಿ ಬಂಡಾಯ ಶಾಸಕರ ವಿರುದ್ಧ ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ
ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಬಸ್ ಓಡಿಸಲು ಡ್ರೈವರ್ ಇಲ್ಲ ಅಂತ ಹೇಳಿದ್ರು ಅಲ್ಲಿ ವೇಕನ್ಸಿ ಇತ್ತು. ನಮಗೆ ನುರಿತ ಡ್ರೈವರ್ ಬೇಕಿತ್ತು ಆದ್ರೆ ಇಂಥ ಚಂಗ್ಲಾಟದವು ನಮಗೆ ಬೇಕಿಲ್ಲ. ಹಾಗೆಯೇ ಕಾಂಗ್ರೆಸ್ ನಲ್ಲಿ ಮಿಠಾಯಿ-ಗಿಠಾಯಿ ತಿಂದುಕೊಂಡಿರಲಿ ಅಂತ ಅಲ್ಲಿಗೆ ಕಳಿಸಿದ್ದೇವೆ ಎಂದು ಏಳು ಮಂದಿ ಜಡಿಎಸ್ ಶಾಸಕರಿಗೆ ಟಾಂಗ್ ನೀಡಿದ್ರು.
Advertisement
ತಾಕತ್ತು ಹಾಗೂ ಮಾನಮರ್ಯಾದೆ ಇದ್ದರೆ ಆ ಶಾಸಕರು ನಾಳೆಯೇ ರಾಜೀನಾಮೆ ಕೊಟ್ಟು ಜನರ ಮುಂದೆ ಬರಲಿ. ಡಿಸೆಂಬರ್ ವರೆಗೂ ಏಕೆ ಕಾಯ್ತಾರೆ ಎಂದು ಹೆಚ್ ಡಿ ರೇವಣ್ಣ ಬಂಡಾಯ ಶಾಸಕರಿಗೆ ಸವಾಲ್ ಹಾಕಿದರು.
Advertisement
ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿಡುತ್ತೇನೆ: ಜಮೀರ್ ಅಹ್ಮದ್
Advertisement
ಶಾಸಕ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಜಮೀರ್ ರುಂಡ ತಗೋಂಡು ನಾವೇನು ಮಾಡೋಣ ಎಂದು ಪ್ರಶ್ನಿಸಿದರು. ಕುರಿ ರುಂಡವನ್ನು ಕಡಿಯದಂತೆ ಕಾಗೋಡು ತಿಮ್ಮಪ್ಪ ಕಾಯ್ದೆ ತರ್ತಾರಂತೆ. ನಮಗೆ ಅವರ ರುಂಡ ಬೇಡ ಎಂದು ವ್ಯಂಗ್ಯವಾಡಿದ್ರು. ಮಾನಮಾರ್ಯಾದೆ ಇದ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ಜಮೀರ್ ಹಮದ್‍ಗೆ ನೇರವಾಗಿ ಸವಾಲ್ ಹಾಕಿದ್ರು.