– ಕಾಂಗ್ರೆಸ್ ಸರ್ಕಾರ ಜಿಟಿಡಿ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು ಎಂದ ಮಾಜಿ ಸಚಿವ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೆ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ (GT Devegowda) ಮತ್ತು ಅವರ ಪುತ್ರ ಜೈಲಿನಲ್ಲಿ ಇರಬೇಕಾಗಿತ್ತು ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಬಾಂಬ್ ಸಿಡಿಸಿದ್ದಾರೆ.
Advertisement
ವಿಧಾನಸೌಧದಲ್ಲಿಂದು (Vidhanasoudha) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ (HD kumaraswamy) ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು. ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು.
Advertisement
Advertisement
ಯಾವ ಕೇಸ್ ಅಂತ ಈಗ ಇರೋ ಸರ್ಕಾರದಲ್ಲಿರೋ ನಾಯಕರನ್ನ ಕೇಳಿ ಅಂತ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿದ್ರು. ಇದನ್ನೂ ಓದಿ: ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ
Advertisement
ಗೌಡರು, ಹೆಚ್‌ಡಿಕೆ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ:
ಇದೇ ವೇಳೆ ಜೆಡಿಎಸ್ ನಾಯಕ ಸುರೇಶ್ ಬಾಬು ಮಾತನಾಡಿ, ಜಿ.ಟಿ ದೇವೇಗೌಡರಿಗೆ ಅಸಮಾಧಾನ ಇರೋದು ಸತ್ಯ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗಲಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ದಂಪತಿ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್ – ಸ್ಥಳದಲ್ಲೇ ಸಾವು
ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ. ಇವತ್ತು ನಾನು ಸುದ್ದಿಗೋಷ್ಠಿಗೆ ಬರೋಕೆ ಹೇಳಿದ್ದೆ ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ, ಪಕ್ಷದ ಮೇಲೆ ಅವರಿಗೆ ಅಸಮಾಧಾನ ಇದೆ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ. ಪಕ್ಷದಲ್ಲಿ ಎಲ್ಲವೂ ಸರಿ ಆಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.