ಬೆಂಗಳೂರು: ಹಾಸನ (Hassan) ಟಿಕೆಟ್ ವಿಚಾರದಲ್ಲಿ ರೇವಣ್ಣ (HD Revanna) ವರ್ಸಸ್ ಕುಮಾರಸ್ವಾಮಿ (HD Kumaraswamy) ಗೇಮ್ ಶುರುವಾಯ್ತಾ ಅಂತ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಹಾಸನದಲ್ಲಿ ದೇವೇಗೌಡ, ಕುಮಾರಸ್ವಾಮಿ ನಿರ್ಧಾರವೇ ಫೈನಲ್ ಎಂದೇ ರಾಜಕೀಯ ಆಟ ಆಡ್ತಿದ್ದಾರಾ ರೇವಣ್ಣ ಎಂಬ ಚರ್ಚೆ ಪ್ರಾರಂಭವಾಗಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ನಿಖಿಲ್ ರಾಮನಗರದಿಂದ ಗೆಲ್ತಾನೆ, ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಗೆಲ್ತಾರೆ ಎಂದು ರೇವಣ್ಣ ಹೇಳಿದ್ದರು. ರೇವಣ್ಣ ಮಾತಿನ ಅರ್ಥವೇನು? ಎಂಬುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.
Advertisement
Advertisement
ಕುಮಾರಸ್ವಾಮಿ ಪತ್ನಿ, ಮಗನ ಹೆಸರು ರೇವಣ್ಣ ಪ್ರಸ್ತಾಪ ಮಾಡಿ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಡಿಸುವ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ನಿಖಿಲ್, ಅನಿತಾ ಕುಮಾರಸ್ವಾಮಿ ಮುಂದಿಟ್ಟುಕೊಂಡು ರಾಜಕೀಯ ದಾಳ ಉರುಳಿಸಿದ್ರಾ ರೇವಣ್ಣ? ಅವರಿಗೆ ಟಿಕೆಟ್ ಕೊಟ್ಟಿದ್ದೀರಾ ನಮಗೂ ಟಿಕೆಟ್ ಕೊಡಿ ಎಂಬ ಒತ್ತಡ ತಂತ್ರನಾ? ಅವರು ಗೆಲ್ಲಬಹುದಾದರೆ ನಾವು ಗೆಲ್ಲಲೂ ಆಗೋದಿಲ್ಲವಾ ಎಂಬ ಮಾತಿನ ಅರ್ಥದಲ್ಲಿ ದಾಳ ಉರುಳಿಸಿದ್ರಾ ರೇವಣ್ಣ? ಎಂಬ ಲೆಕ್ಕಚಾರ ಶುರುವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ವಂತ ಬಲದಲ್ಲಿ ಗೆಲ್ಲಲು ಬಿಜೆಪಿಯಿಂದ ರೆಡಿಯಾಯ್ತು ಸೀಟ್ ಶೇರಿಂಗ್ ಫಾರ್ಮುಲಾ
Advertisement
Advertisement
ರೇವಣ್ಣ ಮಾತಿನಿಂದ ನಿಖಿಲ್, ಅನಿತಾ ಕುಮಾರಸ್ವಾಮಿ ಇಬ್ಬರು ಗೆಲ್ತಾರೆ ಎಂದು ಹೇಳಿ ಇಬ್ಬರಿಗೂ ಟಿಕೆಟ್ ಕೊಟ್ಟಿದ್ದೀರಾ ಎಂಬ ಸಂದೇಶ ಸ್ಪಷ್ಟ ಪಡಿಸೋದು. ಒಂದೇ ಕುಟುಂಬದಲ್ಲಿ ಇಬ್ಬರಿಗೂ ಟಿಕೆಟ್ ಕೊಟ್ಟಿದ್ದೀರಾ ಅಂತ ಪರೋಕ್ಷವಾಗಿ ಭವಾನಿಗೆ ಟಿಕೆಟ್ ಕೊಡಿಸುವ ತಂತ್ರ ಶುರು ಮಾಡಿದ್ರಾ? ನಿಖಿಲ್, ಅನಿತಾ ಕುಮಾರಸ್ವಾಮಿ ಸ್ವಂತ ಶಕ್ತಿಯಿಂದ ಗೆಲ್ತಾರೆ. ಅದೇ ರೀತಿ ಭವಾನಿ ರೇವಣ್ಣ ಕೂಡಾ ಸ್ವಂತ ಶಕ್ತಿ ಮೇಲೆ ಗೆಲ್ತಾರೆ ಎಂಬ ಸಂದೇಶನಾವನ್ನ ರೇವಣ್ಣ ಕೊಟ್ರಾ? ಅವರಿಗೂ ಟಿಕೆಟ್ ಕೊಟ್ಟಿದ್ದೀರಾ, ಅದೇ ರೀತಿ ನಮಗೂ ಟಿಕೆಟ್ ಕೊಡಿ ಎಂಬ ಸಂದೇಶವನ್ನು ರೇವಣ್ಣ ಕೊಟ್ಟರಾ? ಭವಾನಿ ರೇವಣ್ಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಕೂಡಾ ಸ್ವಂತ ಶಕ್ತಿಯಿಂದ ಗೆಲ್ತಾರೆ ಎಂಬ ಸಂದೇಶ ಕೊಡೋ ಮೂಲಕ ಭವಾನಿ ಪರ ಬ್ಯಾಟಿಂಗ್ ಮಾಡಿದ್ದಾರೆ ರೇವಣ್ಣ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k