ಬೆಂಗಳೂರು: ರಾಜ್ಯದಲ್ಲಿ ಸ್ವಂತ ಬಲದಲ್ಲಿ ಗೆಲ್ಲಲು ಬಿಜೆಪಿ (BJP) ಯಿಂದ ಭರ್ಜರಿ ಸೀಟ್ ಶೇರ್ ಫಾರ್ಮುಲಾ ರೆಡಿಯಾಗಿದೆ. 224 ಕ್ಷೇತ್ರಗಳಲ್ಲಿ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ಮಧ್ಯೆ 50% ಸೀಟ್ ಶೇರ್ ಫಾರ್ಮುಲಾ ತಂತ್ರಕ್ಕೆ ಕಮಲ ಪಡೆ ಜೈ ಅಂದಿದೆ. ಆ ಮೂಲಕ ಚುನಾವಣೆಯಲ್ಲಿ ರಾಜ್ಯ+ಕೇಂದ್ರದ ಜಂಟಿ ಸಹಭಾಗಿತ್ವದಡಿ ಗೆಲ್ಲಲು ಪ್ಲಾನ್ ರೂಪಿಸಲಾಗಿದೆ. 50% ನಲ್ಲಿ ರಾಜ್ಯದ್ದೆಷ್ಟು, ಹೈಕಮಾಂಡ್‍ನದ್ದೆಷ್ಟು ಅನ್ನೋ ವಿವರ ಇಲ್ಲಿದೆ.
Advertisement
ಪ್ರತೀ ರಾಜ್ಯಗಳ ವಿಧಾನಸಭಾ ಚುನಾವಣೆ (Vidhanasabha Elections) ಯಲ್ಲಿ ಪ್ರಧಾನಿ ಮೋದಿ (Narendra Modi) ಹವಾ ಜೋರಾಗೇ ಇರುತ್ತೆ. ಪ್ರಧಾನಿ ಮೋದಿ ಅಲೆ ನಂಬಿಯೇ ಬಿಜೆಪಿ ನಾಯಕರು ನಮ್ಮ ರಾಜ್ಯದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಜ್ಯದಲ್ಲಿ 50% ಸೀಟ್ ಶೇರ್ ಪಡೆಯಲು ಬಿಜೆಪಿಯಿಂದ ಭರ್ಜರಿ ಗೆಲುವಿನ ಸೂತ್ರ ರೆಡಿಯಾಗಿದೆ. ಈ ಗೆಲುವಿನ ಸೂತ್ರದ ಬಗ್ಗೆ ಹೈಕಮಾಂಡ್ ಮತ್ತು ರಾಜ್ಯ ಮಧ್ಯೆ ಮಹತ್ವದ ಅನುಸಂಧಾನ ಏರ್ಪಟ್ಟಿದೆ.
Advertisement
Advertisement
ಮೋದಿ ಅಲೆಯ ಜೊತೆಗೆ ರಾಜ್ಯ ನಾಯಕರ ಪ್ರಭಾವವನ್ನೂ ವರ್ಕೌಟ್ ಮಾಡಲು ತಂತ್ರ ಹೆಣೆಯಲಾಗಿದೆ. ಬಿಜೆಪಿ ಗೆಲುವಿಗೆ ಮೋದಿ+ಶಾ ಅಲೆ + ಜಾತಿ, ಹಿಂದುತ್ವ, ವೈಯಕ್ತಿಕ, ಪಕ್ಷದ ವರ್ಚಸ್ಸಿನ ಸೂತ್ರ ಇದು. ಮೋದಿ+ಅಮಿತ್ ಶಾ ಅಲೆಯಿಂದ 4% – 5% ಸೀಟ್ ಹೆಚ್ಚಳ ಆಗೋ ವಿಶ್ವಾಸ ಇದೆ. ಅಂದ್ರೆ ಮೋದಿಯವರ ಪ್ರಭಾವದಿಂದ ಕನಿಷ್ಠ 10 ರಿಂದ ಗರಿಷ್ಠ 15 ಕ್ಷೇತ್ರಗಳಲ್ಲಿ ಗೆಲ್ಲುವ ಲೆಕ್ಕಾಚಾರ ಇಟ್ಟುಕೊಳ್ಳಲಾಗಿದೆ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ
Advertisement
ಇನ್ನು ಉಳಿದ 45%+ ಸೀಟ್ ಗೆಲ್ಲೋ ಜವಾಬ್ದಾರಿ ರಾಜ್ಯ ನಾಯಕರ ಹೆಗಲಿಗೆ ವಹಿಸಲಾಗಿದೆ. ಅಂದ್ರೆ ಕನಿಷ್ಠ 110 ಕ್ಷೇತ್ರಗಳಲ್ಲಿ ಗೆಲ್ಲುವ, ಗೆಲ್ಲಿಸುವ ಹೊಣೆ ರಾಜ್ಯ ನಾಯಕರ ಮೇಲಿದೆ. ಜಾತಿ, ಅಭಿವೃದ್ಧಿ, ಹಿಂದುತ್ವ, ವೈಯಕ್ತಿಕ, ಪಕ್ಷದ ವರ್ಚಸ್ಸು ಮೂಲಕ 115 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮರಳಿ ಕಬ್ಜಾ ಮಾಡಲು ಪ್ಲಾನ್ ಮಾಡಲಾಗಿದೆ. 2018 ರ ಸಾರ್ವರ್ತಿಕ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿತ್ತು. ಆ ನಂತರ ಬದಕಾದ ರಾಜಕೀಯ ಸನ್ನಿವೇಶದಲ್ಲಿ 17 ಜನ ವಲಸಿಗರು ಕಾಂಗ್ರೆಸ್ (Congress), ಜೆಡಿಎಸ್ (JDS) ತೊರೆದು ಬಿಜೆಪಿ ಸೇರಿದರು.
ಸದ್ಯದ ಬಿಜೆಪಿ ಬಲಾಬಲ 120 ಇದೆ. ಈ ಬಾರಿ ಆಗುವ ಸಂಭಾವ್ಯ ಏರುಪೇರು ಲೆಕ್ಕಾಚಾರದಲ್ಲಿ ಕನಿಷ್ಠ 115 ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂದು ರಾಜ್ಯ ನಾಯಕರಿಗೆ ಹೈಕಮಾಂಡ್ ಟಾಸ್ಕ್ ಕೊಟ್ಟಿದೆ. ಆ ಮೂಲಕ 50% ಸೀಟ್ ಗಳಲ್ಲಿ ಗೆದ್ದು ಸ್ವಂತವಾಗಿ ಅಧಿಕಾರ ರಚಿಸಲು ಸ್ಟ್ರಾಟೆಜಿ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k