ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರ ಎಸ್‍ಪಿ ಸಂತೋಷ್ ಬಾಬುಗೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ. ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಪೊಲೀಸ್ ಅಧಿಕಾರಿಗಳನ್ನ ಇಟ್ಟುಕೊಂಡು ರಾಜಕೀಯ ಮಾಡಲ್ಲ. ರೈತರು ಹೊಲಗಳಲ್ಲಿ ಕೆಲಸ ಮಾಡಿ ಕುಡಿಯಲು 20 ಮದ್ಯದ ಬಾಟೆಲ್ ಇಟ್ಕೊಂಡಿದ್ದವರನ್ನು ಜೈಲಿಗೆ ಕಳುಹಿಸುತ್ತೀರಿ, ನಿಮ್ಮ ಇಲಾಖೆಯ ಗೋವಿಂದರಾಜು 500 ಬಾಟೆಲ್ ಇಟ್ಕೊಂಡು ಸಿಕ್ಕಿದವರನ್ನು ಸ್ಟೇಷನ್‍ನಲ್ಲಿ ಬೇಲ್ ಕೊಟ್ಟು ಕಳುಹಿಸುತ್ತಾನೆ ಎಂದು ಫೋನ್ ಮೂಲಕ ಕಿಡಿಕಾರಿದರು. ಇದನ್ನೂ ಓದಿ: ಉಲ್ಟಾ ಹೊಡೆದ ಸಿಎಂ ಇಬ್ರಾಹಿಂ – ಫೆ.14 ಅಲ್ಲ ಬಜೆಟ್ ನಂತರ ಕಾಂಗ್ರೆಸ್ ತೊರೆಯುವ ನಿರ್ಧಾರ
ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡು. ನಾನು ಗೌರವಯುತವಾಗಿ ಅಧಿಕಾರಿಗಳಿಗೆ ಗೌರವ ಕೊಡುವವನು ನೀವು ಪಕ್ಷಾತೀತವಾಗಿ ಕೆಲಸ ಮಾಡಿ. ನೀವು ಹೀಗೆ ನಡೆದರೆ ಕನಕಪುರದವರ ತರಹ ಡೈಲಾಗ್ ಹೇಳ್ತೇನೆ. ನೀವು ಎಲ್ಲಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡೋದನ್ನು ನಿಲ್ಲಿಸಿ, ಆಗ ನಿಮ್ಮನ್ನು ನಾನು ಮೆಚ್ಚುತ್ತೇನೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರಿದ್ದ ಕಾರು ಕೂಡಾ ಟೊಯಿಂಗ್!