ಲಕ್ನೋ: ಪ್ರಯಾಣಿಕರಿದ್ದ ಕಾರೊಂದನ್ನು ಟೊಯಿಂಗ್ ಮಾಡಲಾದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಕಾರು ಚಾಲಕ ಸುನಿಲ್ ಹಾಗೂ ಆತನ ಸ್ನೇಹಿತ ಹಜರತ್‍ಗಂಜ್ ನಗರಕ್ಕೆ ತೆರಳಿದ್ದರು. ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಖರೀದಿ ಮಾಡಬೇಕಿದ್ದ ವಸ್ತುಗಳ ಬಗ್ಗೆ ಚರ್ಚೆಯಲ್ಲಿದ್ದರು. ಈ ವೇಳೆ ಟಾ-ಟ್ರಕ್ ಬಂದು ಕಾರನ್ನು ಎಳೆದುಕೊಂಡು ಹೋಗಿದೆ.
Advertisement
ನೋ ಪಾರ್ಕಿಂಗ್ ವಲಯದಲ್ಲಿ ವಾಹನಗಳನ್ನು ನಿಲ್ಲಿಸಿದ್ದರೂ ಅದರಲ್ಲಿ ಪ್ರಯಾಣಿಕರಿದ್ದರೆ ಅದನ್ನು ಎಳೆದೊಯ್ಯಬಾರದೆಂಬ ನಿಯಮವಿದೆ. ಈ ಘಟನೆ ನಡೆದಾಗ ಸ್ಥಳದಲ್ಲಿ ನೆರೆದಿದ್ದವರು ವೀಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದಾರೆ. ಇದನ್ನೂ ಓದಿ: ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ
Advertisement
Advertisement
ವೀಡಿಯೋ ವೈರಲ್ ಆಗುತ್ತಿದ್ದಂತೆ ನಗರ ಪಾಲಿಕೆ ಆಯುಕ್ತರ ಗಮನಕ್ಕೆ ಬಂದಿದೆ. ಬಳಿಕ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಭಾರತದ ಆಯುರ್ವೇದ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಿಲು ಕೀನ್ಯಾ ಮಾಜಿ ಪ್ರಧಾನಿ ಮನವಿ