ನೈರೋಬಿ: ಭಾರತದ ಆಯುರ್ವೇದ ಚಿಕಿತ್ಸೆಗೆ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ಮಾರು ಹೋಗಿದ್ದಾರೆ. ಇವರ ಪುತ್ರಿಗೆ ಕೇರಳದಲ್ಲಿ ನೀಡಿರುವ ಕಣ್ಣಿನ ಚಿಕಿತ್ಸೆಯಿಂದ ದೃಷ್ಟಿ ಬಂದಿದೆ. ಹೀಗಾಗಿ ಇವರು ಒಂದು ಉತ್ತಮ ನಿರ್ಧಾರವನ್ನು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಅವರು, ಆಯುರ್ವೇದ ಶಕ್ತಿಯಿಂದ ನನ್ನ ಮಗಳು ಮರಳಿ ದೃಷ್ಟಿ ಪಡೆದಿದ್ದಾಳೆ. ಈ ಅಮೂಲ್ಯ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಬೇಕು. ಇಲ್ಲಿನ ಔಷಧಿ ಸಸ್ಯಗಳನ್ನು ಬೆಳೆಯಲು ಪೂರಕ ವಾತಾವರಣವಿದೆ. ಈ ಮೂಲಕ ವಿಶ್ವದ ಆರೋಗ್ಯ ಸಮಸ್ಯೆಗೆ ಭಾರತದ ಆಯುರ್ವೇದ ಚಿಕಿತ್ಸೆ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂದು ರೈಲಾ ಒಡಿಂಗಾ, ಮೋದಿ ಭೇಟಿಯಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ
Advertisement
I came to India for my daughter’s eye treatment in Kochi, Kerala. After three weeks of treatment, there was a substantial improvement in her eyesight. It was a big surprise for my family that our daughter could see almost everything: Former Kenya PM Raila Odinga (1/2) pic.twitter.com/4SSIXFift4
— ANI (@ANI) February 13, 2022
Advertisement
2017ರಲ್ಲಿ ಟ್ಯೂಮರ್ ಆರೋಗ್ಯ ಸಮಸ್ಯೆಗೆ ತುತ್ತಾದ ರೋಸಮೇರೆ ಕಣ್ಣಿನ ದೃಷ್ಟಿ ಕಳೆದೆಕೊಂಡರು. ಬಳಿಕ ಆಫ್ರಿಕಾ, ಜರ್ಮನಿ, ಇಸ್ರೇಲ್, ಚೀನಾ ಸೇರಿದಂತೆ ಕೆಲ ದೇಶಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಶ್ರೀಧಾರೀಯಂ ಆಯುರ್ವೇದ ಕಣ್ಣಿ ಆಸ್ಪತ್ರೆ ಕುರಿತು ಮಾಹಿತಿ ಪಡೆದು ನೇರವಾಗಿ ಕೇರಳಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಪರಿಣಾಮ ರೋಸಮೇರಿ ಇದೀಗ ಬಹುತೇಕ ಕಣ್ಣಿನ ದೃಷ್ಟಿ ಪಡೆದಿದ್ದಾರೆ. ಓದಲು ಸಾಧ್ಯವಾಗುತ್ತಿದೆ ಎಂದು ರೈಲಾ ಒಡಿಂಗಾ ಹೇಳಿದ್ದಾರೆ.
Advertisement
By using these traditional medicines, she finally has her eyesight back and this gave us a lot of confidence. I have discussed with PM Modi to bring this treatment method (Ayurveda) to Africa and use our indigenous plants for therapeutics: Former PM of Kenya, Raila Odinga (2/2) pic.twitter.com/dejkwkEQ3V
— ANI (@ANI) February 13, 2022
Advertisement
ರೋಸಮೆರಿ ಒಡಿಂಗಾ 2019ರಿಂದ ಶ್ರೀಧಾರೀಯಂ ಆಯುರ್ವೇದಾ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2019ರಲ್ಲಿ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದ ರೋಸಮೇರಿ, ಸತತ ಚಿಕಿತ್ಸೆಯಿಂದ ಮರಳಿ ದೃಷ್ಟಿ ಪಡೆದಿದ್ದಾರೆ. ನನಗೆ ಓದಲು ಸಾಧ್ಯವಾಗುತ್ತಿದೆ. ಫೋನ್ ರಿಸೀವ್ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕಿಂತ ಸಂತಸ ಇನ್ನೇನು ಬೇಕು. ನಾನು ಕೇರಳದ ಶ್ರೀಧಾರೀಯಂ ಆಯುರ್ವೇದ ಕಣ್ಣಿ ಆಸ್ಪತ್ರೆಗೆ ಆಭಾರಿಯಾಗಿದ್ದೇನೆ ಎಂದು ರೋಸಮೇರಿ ಹೇಳಿದ್ದಾರೆ.