ಮಂಡ್ಯ: ಶಿವರಾಮೇಗೌಡ ಅವರು ನನಗೆ ಕ್ಷಮೆ ಕೇಳುವುದಲ್ಲ. ಮಂಡ್ಯ ಜಿಲ್ಲೆಯ ಜನರ ಹತ್ತಿರ ಕ್ಷಮೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದೇಗೌಡರು ನಮ್ಮ ಒಕ್ಕಲಿಗ ಸಮಾಜದ ರಾಜ್ಯದ ನಾಯಕರು ಹಾಗೂ ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದವರು. ನಮಗೆ ಅವರಿಗೂ ರಾಜಕೀಯ ವಿಚಾರದಲ್ಲಿ ಬೇರೆ ಇರುವ ನಿಲುವು ಬೇರೆ. ನಮ್ಮ ಸಮಾಜದ ಮುಖಂಡರು ಹೋರಾಟಗಾರರ ಮೇಲೆ ಅಸಹ್ಯಕರವಾಗಿ ಮಾತನಾಡಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಅವರು ಇದಕ್ಕೆ ನನ್ನ ಕ್ಷಮೆ ಕೇಳುವುದಲ್ಲ. ಮಂಡ್ಯ ಜಿಲ್ಲೆಯ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಜವಾಬ್ದಾರಿಯೂ ಸ್ಥಾನದಲ್ಲಿ ಇರುವ ವ್ಯಕ್ತಿ ಸರಿಯಾಗಿ ಮಾತನಾಡಬೇಕು. 9 ಚುನಾವಣೆ ಎದುರಿಸಿ ಸಂಸದರಾಗಿ, ಶಾಸಕರಾಗಿರುವವರು ಹೀಗೆ ಮಾತನಾಡಬಾರದು. ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿಲ್ಲ ಅಂದರೆ ಆ ಸ್ಥಾನಕ್ಕೆ ಗೌರವವಿಲ್ಲ. ಜನತೆಯ ಕ್ಷಮೆ ಕೊರುವುದು ಮಾತ್ರ ಅಲ್ಲಾ ಸಂಘಟನೆಯ ದೃಷ್ಟಿಯಿಂದ ಸರಿಯಾಗಿ ನಡೆದುಕೊಳ್ಳಬೇಕು. ಯಾವುದಾದರೂ ತೀರ್ಮಾನ ಆಗಬೇಕು ಅಂದರೆ ನಾಲ್ಕು ಗೋಡೆ ಮಧ್ಯ ತೀರ್ಮಾನ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಪಾರ್ಲಿಮೆಂಟ್ ಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡಿದ್ದಾರೆ ಅಂದಿದ್ದಾರೆ. ಮಂಡ್ಯ ಜಿಲ್ಲೆಯ ಜನ ದುಡ್ಡಿನ ಮೇಲೆ ವೋಟ್ ಹಾಕುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಯಾರಿಗೆ ಹಣ ಕೊಟ್ಟಿದ್ದಾರೆ, ಯಾಕೆ ಖರ್ಚು ಮಾಡಿದ್ದಾರೆ ಎಂದ ಅವರು, ನಾಗಮಂಗಲ ಚುನಾವಣೆಗೆ ಮತ್ತೆ 30 ಕೋಟಿ ತರುತ್ತೇನೆ ಎಂದು ಸಾರ್ವಜನಿಕವಾಗಿ ಹೇಳುತ್ತಾರೆ. ಇದರಿಂದ ಪಕ್ಷದ ವರ್ಚಸ್ಸು ಹಾಳಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ನಂಬಿಕೆಯಿಲ್ಲ: ಎಚ್‍ಡಿಕೆ
ಪಕ್ಷ ಸಂಘಟನೆಗೆ ಬಿಜೆಪಿಯಿಂದ ದೇಣಿಗೆ ಸಂಗ್ರಹ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಿಂದ ಇಷ್ಟು ವರ್ಷ ಹಣ ಹೊಡೆದಿರುವುದು ಸಾಲುವುದಿಲ್ಲ. ಮೂರು ವರ್ಷಗಳಿಂದ ಲೂಟಿ ಹೊಡೆದಿದ್ದಾರೆ. ಇಷ್ಟು ದಿನ ಲೂಟಿ ಮಾಡಿರುವುದು ಸಾಲುವುದಿಲ್ಲವಾ ಎಂದು ವ್ಯಂಗ್ಯವಾಡಿದ ಅವರು, 40% ಅಂತ ಗುತ್ತಿಗೆದಾರರೆ ಪ್ರಧಾನಿಗೆ ದೂರು ಕೊಟ್ಟಿದ್ದಾರೆ. ಬಿಜೆಪಿಯವರು ಉಪಚುನಾವಣೆಯನ್ನು ಹೇಗೆ ಮಾಡಿದರು ಎಂದು ಜನರಿಗೆ ಗೊತ್ತಿದೆ. ಅವರು ಜನರಿಂದ ದೇಣಿಗೆ ಸಂಗ್ರಹಿಸಿ ಚುನಾವಣೆ ನಡೆಸಿದ್ರಾ? ದೇಣಿಗೆ ಸಂಗ್ರಹ ಎಂಬುದು ಬಿಜೆಪಿಯವರ ಹೊಸ ನಾಟಕ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?
ಶಾಸಕರ ಪಕ್ಷಾಂತರ ವಿಚಾರವಾಗಿ ಮಾತನಾಡಿದ ಅವರು, ಇನ್ನು ಒಂದು ವರ್ಷಗಳ ಇದು ನಿರಂತರವಾಗಿ ನಡೆಯುವಂತ ಪ್ರಕ್ರಿಯೆಯಾಗಿದೆ. ಪುಟ್ಟರಾಜು ಅವರು ಜೆಡಿಎಸ್ ಬಿಡುವುದಿಲ್ಲ. ಈ ಬಗ್ಗೆ ಅವರೆ ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಚರ್ಚೆ ಅನವಶ್ಯಕ. ಕಾಂಗ್ರೆಸ್ ಅವರು ಬೇರೆ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಸ್ವಂತ ಶಕ್ತಿ ಇಲ್ಲ. ಅದಕ್ಕೆ ಬೇರೆಯವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದು ಟೀಕಿಸಿದರು.