ಹಾವೇರಿ: ಆಣೆ ಹಾಕುವುದಾದರೆ ಸಿದ್ದರಾಮಯ್ಯನವರು ಅವರ ಅಪ್ಪನ ಮೇಲೆ ಹಾಕಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರಿಗೆ ಅಪ್ಪ ಇದ್ದಾರೋ ಇಲ್ವೋ ಎಂದು ಪ್ರಶ್ನಿಸಿದ ಅವರು, ನಮ್ಮ ಅಪ್ಪನ ಮೇಲೆ ಏನಕ್ಕೆ ಆಣೆ ಹಾಕುತ್ತಾರೆ? ಸಿಎಂ ಇದೇ ಮೊದಲ ಬಾರಿ ಅಲ್ಲ ಬಹಳಷ್ಟು ಬಾರಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
Advertisement
ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಮುಖ್ಯಮಂತ್ರಿಗಳು ತಿಳಿದು ಕೊಳ್ಳಬೇಕು. ಸಾರ್ವಜನಿಕವಾಗಿ ಹೀಗೆ ಲಘುವಾಗಿ ಮಾತನಾಡುವುದನ್ನು ಮುಖ್ಯ ಮಂತ್ರಿಗಳು ಬಿಡಬೇಕು ಎಂದು ಎಚ್‍ಡಿಕೆ ಸಲಹೆ ನೀಡಿದರು. ಇದನ್ನೂ ಓದಿ: ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂ
Advertisement
ಸಿದ್ದರಾಮಯ್ಯನವರು ರಾಮನಗರ ಕ್ಷೇತ್ರಕ್ಕೆ ಬಂದು ಒಂದು ವಾರ ಹಳ್ಳಿ ಹಳ್ಳಿಯಲ್ಲಿ ಕ್ಯಾಂಪೇನ್ ಮಾಡಲಿ. ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಯಾರು ಗೆಲ್ಲುತ್ತಾರೆ ಒಂದು ಪರೀಕ್ಷೆ ಆಗಿ ಹೋಗಲಿ ಎಂದು ಸಿಎಂಗೆ ಸವಾಲು ಹಾಕಿದ್ದಾರೆ.
Advertisement
ಕಳೆದ 5 ವರ್ಷದಲ್ಲಿ ರಾಮನಗರ ಕ್ಷೇತ್ರದಲ್ಲಿ ಅವರು ಏನು ಕೆಲಸ ಮಾಡಿದ್ದಾರೆ ಅಂತ ಮತ ಕೇಳಲು ಹೋಗುತ್ತಾರೆ? ರಾಮನಗರದಲ್ಲಿ ಒಂದು ದಿನ, ಶಿಕಾರಿಪುರದಲ್ಲಿ ಒಂದು ದಿನ ಪ್ರಚಾರ ಮಾಡಿದರೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರನ್ನು ಸೋಲಿಸುತ್ತೇನೆ ಎಂದು ಉದ್ಧಟತನದ ಮಾತುಗಳನ್ನು ಆಡಿದ್ದಾರೆ. ಆದರೆ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಆರು ದಿನದಿಂದ ಮತ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಇದನ್ನೂ ಓದಿ: ನಾನು ಪ್ರಚಾರ ಮಾಡದೇ ಇದ್ರೂ ಗೆಲ್ತೀನಿ – ಸಿಎಂಗೆ ಯಡಿಯೂರಪ್ಪ ತಿರುಗೇಟು
Advertisement
ರಾಜ್ಯದ 224 ಕ್ಷೇತ್ರಗಳ ಮತದಾರರ ಮತವನ್ನು ಜೇಬಿನಲ್ಲಿ ಇಟ್ಟುಕೊಂಡಂತೆ ವರ್ತಿಸುತ್ತಿದ್ದಾರೆ. ಅವರ ಅಪ್ಪನಾಣೆ ಗೆಲ್ಲೊದಕ್ಕೆ ಆಗಲ್ಲ. ಅವರ ಅಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಹೇಳುತ್ತಾರೆ. ಮುಖ್ಯಮಂತ್ರಿ ಯಾರು ಆಗಬೇಕು ಅಂತ ತೀರ್ಮಾನ ಮಾಡುವುದು ಜನ ಎಂದು ತಿರುಗೇಟು ನೀಡಿದರು.
ಮುಖ್ಯಮಂತಿಗಳು ಜಾತಿ ಸಭೆಗಳನ್ನು ಮಾಡುತ್ತಿದ್ದಾರೆ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವಾ? ಚುನಾವಣಾ ಆಯೋಗ ಏನು ಮಾಡುತ್ತಿದೆ? ಪೊಲೀಸ್ ವಾಹನದಲ್ಲಿ ಈಗಿನ ಸರ್ಕಾರ ಹಣವನ್ನು ಸಾಗಿಸುತ್ತದೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತದೆ. ನಾನು ಮುಖ್ಯಮಂತ್ರಿಯಾದಾಗ ಆ ಸ್ಥಾನವನ್ನು ಯಾವತ್ತೂ ದುರುಪಯೋಗ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.