ರಾಯಚೂರು: ನಮ್ಮ ಪಕ್ಷದಲ್ಲಿ ಪ್ರಧಾನಿಯವರು ಏನ್ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದು ಫೈನಲ್. ಆದ್ದರಿಂದ ನಾನು ಮುಂದಿನ ಸಿಎಂ ಆಯ್ಕೆ ಬಗ್ಗೆ ಚರ್ಚೆ ಮಾಡಲು ಇಷ್ಟಪಡಲ್ಲ ಅಂತ ಮಾಜಿ ಸಿಎಂ ಯಡಿಯೂರಪ್ಪ (B. S Yediyurappa) ಹೇಳಿದ್ದಾರೆ.
Advertisement
ರಾಯಚೂರಿನ ಸಿಂಧನೂರಿನಲ್ಲಿ ಬ್ರಾಹ್ಮಣ ಸಿಎಂ (Brahmin Chief Minister) ಬಗ್ಗೆ ಎಚ್‍ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಎಸ್ ವೈ, ಈ ಬಾರಿ 140 ಕ್ಕೂ ಹೆಚ್ಚು ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ನಂತರ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನ ಕೇಂದ್ರದವರು ತೀರ್ಮಾನ ಮಾಡುತ್ತಾರೆ. ಯಾರನ್ನೇ ಸಿಎಂ ಮಾಡಿದರೂ ನಮ್ಮದೇನು ಅಭ್ಯಂತರ ಇಲ್ಲ. ಕುಮಾರಸ್ವಾಮಿಯವರು ಬೇರೆ ಬೇರೆ ಹೇಳಿಕೆಗಳನ್ನ ಕೊಡುವಂತದ್ದಕ್ಕೇನು ಅರ್ಥವಿಲ್ಲ. ಅದಕ್ಕೇನು ಬೆಲೆ ಕೊಡುವ ಅಗತ್ಯವೂ ಇಲ್ಲ ಎಂದರು.
Advertisement
Advertisement
ಬಿಜೆಪಿ ಅಂದ್ರೆ ಲಿಂಗಾಯತ ಅನ್ನುವಂತದ್ದು ಈಗ ಬ್ರಾಹ್ಮಣ ಆಗಿದೆ ಅನ್ನೋ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ನೂರಕ್ಕೆ 90 ಭಾಗ ವೀರಶೈವ ಸಮಾಜ ನಮ್ಮ ಜೊತೆಗಿದ್ದೆ. ನಾನು ಅವರ ಜೊತೆಗಿದ್ದೇನೆ, ಅದರಿಂದ ಯಾವುದೇ ಸಮಸ್ಯೆಯಿಲ್ಲ ಅಂತ ಹೇಳಿದರು. ಇದನ್ನೂ ಓದಿ: ನಾನು ವೀರಶೈವ, ದಲಿತ ಸಮುದಾಯಕ್ಕೂ ಗೌರವ ನೀಡಿದ್ದೇನೆ: ಹೆಚ್‌ಡಿಕೆ
Advertisement
ಶಿವಮೊಗ್ಗ ಏರ್ಪೋರ್ಟ್ (Shivamogga Airport) ಗೆ ನನ್ನ ಹೆಸರಿಡಲು ಬೇಡ ಎಂದಿದ್ದೇನೆ. ಯಾರದೇ ವ್ಯಕ್ತಿ ಹೆಸರಿಡುವುದು ಸರಿಯಲ್ಲ ಎಂದಿದ್ದೇನೆ. ಇದರ ಮೇಲೆ ಕೇಂದ್ರದವರು ಏನ್ ನಿರ್ಧಾರ ತಗೋತಾರೆ ನೋಡಬೇಕು ಅಂತ ಯಡಿಯೂರಪ್ಪ ಹೇಳಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k