ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಡಿಸೆಂಬರ್ 6 ಕ್ಕೆ ದತ್ತಮಾಲೆ (Dattamale) ಧರಿಸಿ ದತ್ತಪೀಠಕ್ಕೆ (Dattapeeth) ಭೇಟಿ ನೀಡಲಿದ್ದಾರೆ. ಜೆಡಿಎಸ್‌ನ (JDS) ಎಲ್ಲಾ ಶಾಸಕರಿಗೂ ಈ ಸಂದರ್ಭ ಜೊತೆಗೂಡಲು ಹೆಚ್‌ಡಿಕೆ ಸೂಚನೆ ನೀಡಿದ್ದಾರೆ.
ಹೆಚ್‌ಡಿಕೆ ಒಂದು ದಿನದ ಮಟ್ಟಿಗೆ ಮಾಲೆ ಧರಿಸಿ ದತ್ತಪೀಠಕ್ಕೆ ಹೋಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಒಟ್ಟಾಗಿ ತೆರಳಿದ್ದ ಜೆಡಿಎಸ್ ಶಾಸಕರು ಇದೀಗ ದತ್ತಪೀಠಕ್ಕೂ ಒಟ್ಟಾಗಿ ತೆರಳುವ ಸಾಧ್ಯತೆ ಇದೆ. ದತ್ತಪೀಠದಲ್ಲಿ ಜೆಡಿಎಸ್ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಇದನ್ನೂ ಓದಿ: ಆಟಿಕೆ ವಸ್ತುಗಳಿದ್ದ ಗೋದಾಮು ಧಗಧಗ – ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆ ರೆಸ್ಕ್ಯೂ
Advertisement
Advertisement
ಕುಮಾರಸ್ವಾಮಿ ಅವರು ಮೊದಲ ಬಾರಿಗೆ ದತ್ತಪೀಠಕ್ಕೆ ತೆರಳುತ್ತಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬೆನ್ನಲ್ಲೇ ಕುಮಾರಸ್ವಾಮಿ ಹಿಂದುತ್ವದ ಹಾದಿಗೆ ಬಂದAತೆ ಭಾಸವಾಗುತ್ತಿದೆ. ದತ್ತಮಾಲೆ ಧರಿಸಿ ದತ್ತಪೀಠದ ದರ್ಶನ ಪಡೆಯಲಿದ್ದಾರೆ. ಈ ಮೂಲಕ 2024ರ ಚುನಾವಣೆಗೆ ಒಕ್ಕಲಿಗ+ಹಿಂದುತ್ವದ ಅಸ್ತ್ರದಲ್ಲಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವ ಸೂಚನೆಯಿದೆ. ಇದನ್ನೂ ಓದಿ: World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?