ಅಹಮದಾಬಾದ್: ಭಾರತದ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಅಹಮದಬಾದ್‍ನ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟೀಂ ಆಸ್ಟ್ರೇಲಿಯಾ (IND Vs AUS) ವಿರುದ್ಧ 6 ವಿಕೆಟ್‍ಗಳ ಸೋಲನ್ನು ಕಂಡಿದೆ. 20 ವರ್ಷಗಳ ಸೇಡನ್ನ ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ಆಸ್ಟ್ರೇಲಿಯಾ ತಿವಿದಿದ್ದು ಮತ್ತೆ ಭಾರತ ಫೈನಲ್‍ನಲ್ಲಿ ಮುಗ್ಗರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಎಡವಿದ್ದೆಲ್ಲಿ; ಇಲ್ಲಿದೆ 5 ಕಾರಣ..
ಗೆಲುವಿಗೆ ಕಾರಣಗಳೇನು..?
ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆಯಾಗಿದೆ. ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾವನ್ನು ವಿಕೆಟ್‍ನಲ್ಲೇ (Wicket) ಕಟ್ಟಿ ಹಾಕಿದೆ. ಅಲ್ಲದೆ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡೋದು ಕಷ್ಟಕರವಾಗಿದ್ದು, ಸ್ಲೋ ಬ್ಯಾಟಿಂಗ್ ಪಿಚ್ ಆಗಿರೋ ಕಾರಣ ಸ್ಫೋಟಕ ಬ್ಯಾಟಿಂಗ್ ಸಾಧ್ಯವಾಗಲಿಲ್ಲ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ
ಎರಡನೇ ಬ್ಯಾಟಿಂಗ್‍ಗೆ (Batting) ಮೊದಲ ಬ್ಯಾಟಿಂಗ್‍ಗಿಂತ ಪಿಚ್ ಉತ್ತಮವಾಗಿತ್ತು. ಡ್ಯೂಪ್ಯಕ್ಟರ್ ಕೂಡ ಟೀಂ ಆಸ್ಟ್ರೇಲಿಯಾಗೆ (Australia) ಸಾಥ್ ನೀಡಿದ್ದು, ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳ ವೈಫಲ್ಯವಾಗಿರುವುದು. ಮಿಡಲ್ ಓವರ್‍ನಲ್ಲಿ ಭಾರತಕ್ಕೆ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ ಇದ್ದದ್ದು, ಆಸ್ಟ್ರೇಲಿಯಾದ ಪ್ರಮುಖ ಮೂರು ವಿಕೆಟ್ ಬೇಗ ಕಳೆದುಕೊಂಡರೂ ದೃತಿಗೇಡದೆ ಇದ್ದದ್ದು ಹಾಗೂ ಭಾರತದ ಬೌಲಿಂಗ್ ಸ್ಟ್ರಾಂಗ್ ಇದ್ರೂ ಪಿಚ್ ಸಪೋರ್ಟ್ ಸಿಗದೇ ಇದ್ದಿದ್ದು ಆಸ್ಟ್ರೇಲಿಯಾ ಗೆಲುವಿಗೆ ಕಾರಣವಾಯಿತು.
ಒಟ್ಟಿನಲ್ಲಿ ಭಾರತ (Team India) ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.