ಚಿಕ್ಕಬಳ್ಳಾಪುರ: ಬಿಜೆಪಿ (BJP) ತನ್ನ ಪಕ್ಷಕ್ಕೆ ಮನೆ ಹಾಳು ಮಾಡೋರು, ತಲೆ ಹೊಡೆದು ಬಂದವರನ್ನ ಸೇರಿಸಿಕೊಂಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕುಟುಕಿದ್ದಾರೆ.

ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ವೇಳೆ ಮಾತನಾಡಿದ ಅವರು, `ರಕ್ತ ಹೀರುವಂತಹ ನಾಯಕ’ ಎಂಬ ಸಚಿವ ಅಶ್ವಥ್ ನಾರಾಯಣ (Ashwath Narayan) ಹೇಳಿಕೆಗೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾನು ಲೂಟಿ ಹೊಡೆದು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ಮಾಡಿಲ್ಲ: HDK

ಅದು ಯಾರ ಬಗ್ಗೆ ಹೇಳಿದ್ರೋ ಗೊತ್ತಿಲ್ಲ. ನಮಗೆ ಅಷ್ಟು ತಿಳುವಳಿಕೆ ಇಲ್ಲ. ರಕ್ತಪಿಪಾಸುಗಳು ಅಂತಾ ಹೇಳಿದ್ದಾರೆ. ನಿನ್ನೆ ಅವರ ಪಕ್ಷಕ್ಕೆ ಯಾರನ್ನೋ ಸೇರಿಸಿಕೊಳ್ತಾ ಇದ್ರಲ್ಲ. ಅವರ ಇತಿಹಾಸ ತೆಗೆದು ನೋಡಿದ್ರೆ ಗೊತ್ತಾಗುತ್ತೆ. ಯಾರು ರಕ್ತ ಹೀರುತ್ತಾ ಇದ್ದರು? ಯಾರು ರಕ್ತಪಿಪಾಸುಗಳು ಅಂತಾ. ತಲೆ ಹೊಡೆದು ಬಂದವರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಅಂತ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (Ashwath Narayan) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ
ಉನ್ನತವಾದ ಬುದ್ಧಿ ಇರೋರು ಉನ್ನತ ಶಿಕ್ಷಣ ಸಚಿವರು. ನಾವು ಹಳ್ಳಿಯಿಂದ ಬಂದವರು ಅಷ್ಟು ಬುದ್ಧಿ ಇಲ್ಲ. ಅವರು ತ್ರಿಕಾಲ ಜ್ಞಾನಿಗಳಿರಬಹುದು, ಕಾಲಜ್ಞಾನಿ ನೆನ್ನೆ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡವರ ಹಿನ್ನೆಲೆ ಏನು ಅಂತ ತಿಳಿದುಕೊಳ್ಳಿ. ಎಷ್ಟು ಮನೆ ಹಾಳು ಮಾಡಿದ್ದಾರೆ. ಅಂತವರನ್ನ ಸೇರಿಸಿಕೊಂಡು ರಕ್ತಪಿಪಾಸುರರ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

