ಬೆಂಗಳೂರು: ಬಂಡೆ ಅನ್ನೋದೇ ಡೇಂಜರ್. ವಯನಾಡ್, ಪಶ್ಚಿಮ ಘಟ್ಟ ಹಾಗೂ ಕೊಡಗಿನಲ್ಲಿ ಭೂಕುಸಿತ ಆಗಿದೆ. ಭೂಕುಸಿತ ಆದ್ರೂ ಬಂಡೆಗಳು ರಕ್ಷಣೆ ಕೊಟ್ಟಿವೆಯೇ? ಭೂಕುಸಿತ ಆಗಿ ಹಲವಾರು ಜನ ಸಾಯೋಕೆ ಬಂಡೆಗಳೇ ಕಾರಣ. ಕರ್ನಾಟಕದಲ್ಲೂ ಈ ಬಂಡೆಗಳೇ ಕಾರಣ ಆಗುವ ಕಾಲ ದೂರವಿಲ್ಲ. ಸಿದ್ದರಾಮಯ್ಯ ಸ್ಥಿತಿಗೆ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ (D.K Shivakumar) ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ವಿರುದ್ಧ ಯಾಕೆ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡಬೇಕು ಎಂದು ಕಾಂಗ್ರೆಸ್‍ನವರು (Congress) ಹೇಳುತ್ತಿದ್ದಾರೆ. ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಿಸಿದ್ದು ಯಾರು? ಸಂಸತ್‍ನಲ್ಲಿ ಸಂವಿಧಾನ ಪುಸ್ತಕ ತೋರಿಸ್ತಾರೆ. ಈಗ ರಾಜ್ಯಪಾಲರ ಅಧಿಕಾರದ ವಿರುದ್ಧ ನೀವು ಏನ್ ಮಾಡ್ತಾ ಇದ್ದೀರಾ? ನನ್ನ ವಿರುದ್ಧ ಆರೋಪ ಬಂದಾಗ ನಾನು ಏಕಾಂಗಿಯಾಗಿ ಎದುರಿಸುತ್ತೇನೆ ಎಂದಿದ್ದೆ. ನಾನು ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನೆ ಮಾಡಿಸಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
Advertisement
ಜಂತಕಲ್ ಮೈನಿಂಗ್ ಕೇಸ್ ಸ್ಕ್ವಾಶ್ ಮಾಡಿದ್ರು. ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡಿ ಎಂದರು. ಅಬ್ರಾಹಂ ನನ್ನ ವಿರುದ್ಧ, ಕೃಷ್ಣ ವಿರುದ್ಧ, ಧರ್ಮಸಿಂಗ್ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಕೇಸ್ ಹಾಕಿದ್ದರು. ಕೃಷ್ಣ ಅವರು ತಡೆ ತಂದಿದ್ದರು ಎಂದು ಆದೇಶ ಪ್ರತಿಯನ್ನು ಅವರು ಓದಿದರು. ಬಳಿಕ, ಇವರನ್ನು ಸುಪ್ರೀಂ ಕೋರ್ಟ್‍ಗೆ ಹೋಗಬೇಡಿ ಎಂದು ಯಾರು ಹಿಡಿದುಕೊಂಡಿದ್ದಾರೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
Advertisement
Advertisement
ನೀವು ತಪ್ಪು ಮಾಡದೇ ಇದ್ದರೆ ನಿಮ್ಮಲ್ಲಿ ನೈತಿಕತೆ ಇದ್ದರೆ ರಾಜ್ಯಪಾಲರ ಮುಖಕ್ಕೆ ಮಸಿ ಬಳಿದು ಪ್ರತಿಭಟನೆ ಮಾಡ್ತಿದ್ದಿರಾ? ಏನು ಸಾಧನೆ ಮಾಡಿದ್ದೀರಿ ಎಂದು ಪ್ರತಿಭಟನೆ ಮಾಡ್ತೀರಾ? ನನ್ನ ಮೇಲೆ ಏನೇ ಇದ್ದರೂ ತನಿಖೆ ಮಾಡಿ ಎಂದು ಸವಾಲು ಹಾಕಿದ್ದಾರೆ.
Advertisement
ಗಂಗೇನಹಳ್ಳಿ ಕೇಸ್ ಹುಡುಕುತ್ತಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ. ಕೇಂದ್ರದ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ? ನಿಮ್ಮಲ್ಲಿಯೇ ನಿಮ್ಮನ್ನು ಇಳಿಸಲು ಕೆಲಸ ಮಾಡ್ತಿದ್ದಾರೆ. ನಿಮ್ಮವರೇ ನಿಮ್ಮನ್ನು ಇಳಿಸಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದ ಅಡಿ ಇರುವ ಯಾವುದೇ ಸಂಸ್ಥೆಯನ್ನೂ ನಾನು ದುರುಪಯೋಗ ಮಾಡಿಕೊಂಡಿಲ್ಲ. ಎಸಿಬಿ ಮೂಲಕ ಸಿದ್ದರಾಮಯ್ಯ ಅನೇಕ ಕೇಸ್‍ನಲ್ಲಿ ರಕ್ಷಣೆ ಪಡೆದಿದ್ದೀರಿ. ಅರ್ಕಾವತಿ ಸೈಟ್ ರೀಡೂ ಹೆಸರಲ್ಲಿ ಯಾರಿಗೆ ಕೊಟ್ಟಿದ್ದೀರಿ? ಸಿದ್ದರಾಮಯ್ಯ ಅವರು ಗೋಗರೆದು ನನ್ನ ಪರ ಮಾತಾಡಿ ಎಂದು ಹೇಳಿ ಬೆಂಬಲ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನನ್ನನ್ನ ಭಯ ಬೀಳಿಸೋಕೆ ಪ್ರಾಸಿಕ್ಯೂಷನ್‍ಗೆ ಅನುಮತಿ ಕೇಳಿದ್ದಾರೆ. ನಾನು ರಾಜೀನಾಮೆ ಕೊಡಿ ಎಂದು ಕೇಳುವುದಿಲ್ಲ. ಕೊಡ್ತಾರೆ ಎನ್ನುವ ನಂಬಿಕೆ ಇಲ್ಲ. ದೇಶದಲ್ಲಿ ಕಾನೂನು ಇದೆ. ಕಾನೂನು ಪ್ರಕಾರ ಎಲ್ಲವೂ ಆಗುತ್ತದೆ. ಒಂದೂವರೆ ವರ್ಷದಿಂದ ಸರ್ಕಾರ ಹಾಳು ಮಾಡಿಕೊಂಡಿದ್ದೀರಿ. ಅಭಿವೃದ್ಧಿ ಆಗ್ತಿಲ್ಲ ಎಂದು ನಿಮ್ಮ ಶಾಸಕರೇ ಹೇಳ್ತಿದ್ದಾರೆ. ಒಬ್ಬರನ್ನು ಉಳಿಸೋಕೆ ರಾಜ್ಯವನ್ನು ಹಾಳು ಮಾಡಬೇಡಿ ಎಂದು ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಸಿಎಂ ಚೇರ್ ಭದ್ರವಾಗಿದೆ. ಆದರೆ ದಾರಿ ತಪ್ಪಿದರೆ ಚೇರ್ ಮೇಲೆ ಕೂತುಕೊಳ್ಳಲು ಆಗುವುದಿಲ್ಲ. ಜಾತಿ ರಕ್ಷಣೆ ಪಡೆದು ಎಷ್ಟು ದಿನ ರಾಜಕೀಯ ಮಾಡ್ತೀರಾ ಎಂದು ಹೆಚ್‍ಡಿಕೆ ಪ್ರಶ್ನಿಸಿದ್ದಾರೆ.