– ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ ಎಂದು ಆರೋಪ
– ದರ್ಶನ್ ಕೇಸ್ – ಇದೊಂದು ಘಟನೆ ಬಗ್ಗೆ ಯಾಕೆ ಮಾತಾಡ್ಬೇಕು? ಎಂದ ಹೆಚ್‌ಡಿಕೆ
ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿಯಾದರು. ಬೆಂಗಳೂರಿನ ರಾಜಭವನದಲ್ಲಿ ಸೌಹಾರ್ದಯುತ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುವುದಾಗಿಯೂ ಅವರು ತಿಳಿಸಿದರು.
ಕೇಂದ್ರ ಸರಕಾರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ರಾಜಭವನಕ್ಕೆ ತೆರಳಿ ಗೌರವಾನ್ವಿತ ರಾಜ್ಯಪಾಲರಾದ ಮಾನ್ಯ ಶ್ರೀ ಥಾವರಚಂದ್ ಗೆಹಲೋತ್ @TCGEHLOT ಅವರನ್ನು ಭೇಟಿ ಮಾಡಲಾಯಿತು.@TcGehlotOffice pic.twitter.com/9dnML7Inip
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 14, 2024
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನನ್ನ ವಿರುದ್ಧ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ನಾನು ಕೇಂದ್ರ ಮಂತ್ರಿ (Central Minister) ಆಗಿರೋದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನನ್ನನ್ನು ಜೈಲಿಗೆ ಹಾಕಿಸಬೇಕು ಅಂತ ಕಷ್ಟಪಡುತ್ತಿದ್ದಾರೆ. ಸರ್ಕಾರದವರು ಬಿಡದಿ ಜಮೀನು ದಾಖಲೆ ಹುಡುಕುತ್ತಿದ್ದಾರೆ. ಇದರಲ್ಲಿ ಎಲ್ಲರೂ ಸೇರಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ಕಣ್ಣೆದುರೇ ಮಗ ಅರೆಸ್ಟ್ – ಮನನೊಂದ ತಂದೆ ಹೃದಯಾಘಾತದಿಂದ ಸಾವು!
Advertisement
Advertisement
ದರ್ಶನ್ ಒಂದು ಘಟನೆ ಯಾಕೆ ಮಾತಾಡಬೇಕು?:
ಇದೇ ವೇಳೆ ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ದರ್ಶನ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ. ಇವತ್ತು ಆ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ದರ್ಶನ್ ಘಟನೆ ಒಂದು ಭಾಗ ಅಷ್ಟೇ. ಈ ಸರ್ಕಾರ ಬಂದ ನಂತರ ಪ್ರತಿದಿನ ಮಾನುಷ್ಯನ ಜೀವನದ ಬಗ್ಗೆ, ಜೀವ ತೆಗೆಯೋದ್ರಲ್ಲಿ ಭಯ ಭಕ್ತಿ ಹೊರಟು ಹೋಗಿದೆ. ಅದಕ್ಕೆ ಕಾರಣ ಈ ಸರ್ಕಾರದ ಆಡಳಿತ. ಒಂದು ಘಟನೆಯನ್ನು ಯಾಕೆ ಮಾತಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ
Advertisement
ಪೊಲೀಸರೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ:
ವೈಯಕ್ತಿಕ ಕಾರಣದಿಂದ ಕೊಲೆ ಮಾಡುವುದು ರಾಜ್ಯದಲ್ಲಿ ಎಷ್ಟು ಸುಲಭವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಡೆಯೇ ಕಾರಣ. ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಬರುವಾಗ ಕೊಟ್ಟು ಬಂದಿದ್ದನ್ನ ಸಂಪಾದನೆ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಶಾಮಿಯಾನ ಹಾಕೋ ಘಟನೆ ಇತಿಹಾದಲ್ಲಿ ಆಗಿರಲಿಲ್ಲ. ಯಥಾ ರಾಜಾ ತಥಾ ಪ್ರಜೆ ರೀತಿ ಈ ಸರ್ಕಾರದ ನಡವಳಿಕೆ ಆಗಿದೆ. ಈ ಸರ್ಕಾರಕ್ಕೆ ಏನಾದ್ರು ಕಿಂಚಿತ್ತೂ ಗೌರವ ಇದ್ದರೆ ಆಡಳಿತದಲ್ಲಿ ಸರಿಪಡಿಸಿಕೊಳ್ಳಲಿ ಎಂದು ತಿವಿದಿದ್ದಾರೆ.
ಬಿಎಸ್‌ವೈ ಪ್ರಕರಣದ ಕುರಿತು ಮಾತನಾಡಿ, ಸರ್ಕಾರ 4 ತಿಂಗಳ ನಡವಳಿಕೆ ಅನುಮಾನ ಇದೆ. ರಾಜ್ಯದ ಜನರೇ ಅನುಮಾನ ಪಡ್ತಿದ್ದಾರೆ. ಕಾನೂನು ಅರಿವು ಇರೋರು ಬಹಳ ಜನ ಈ ರಾಜ್ಯದಲ್ಲಿ ಇದ್ದಾರೆ. ಸಿಎಂ ಕೂಡ ವಕೀಲರಿದ್ದಾರೆ. ಆದರೂ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಇವರಿಗೆ ಯಾವ ನೈತಿಕ ಇದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮನೆಯ ಮೇಲೆ ಗುಂಡಿನ ದಾಳಿ- ಸಲ್ಮಾನ್ ಹೇಳಿಕೆ ದಾಖಲಿಸಿಕೊಂಡ ಮುಂಬೈ ಪೊಲೀಸರು