ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇತಿಹಾಸ ಅರ್ಥ ಮಾಡಿಕೊಳ್ಳಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
Advertisement
ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುವ ಘಟನೆಗಳಿಂದ ಶ್ರೀಲಂಕಾದಲ್ಲಾದಂತೆ ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ಈ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಕರ್ ಅವರು, ಮೊದಲು ಶ್ರೀಲಂಕಾ ಪರಿಸ್ಥಿತಿ ಏನು ಎಂಬುದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಳ್ಳಲಿ. ದೇಶ ದಿವಾಳಿ ಆಗಿ ತುರ್ತು ಪರಿಸ್ಥಿತಿ ಬಂದಿದೆ. ಆದರೆ ನಮ್ಮ ದೇಶ ಸುಸ್ಥಿತಿಯಲ್ಲಿ ಚೆನ್ನಾಗಿದ್ದಾಗಲೂ ತುರ್ತು ಪರಿಸ್ಥಿತಿ ಹೇರಿದ್ದವರು ಕಾಂಗ್ರೆಸ್ ನವರು, ಹೀಗಾಗಿ ಇತಿಹಾಸವನ್ನು ಹೆಚ್‍ಡಿಕೆ ಅರ್ಥ ಮಾಡಿಕೊಳ್ಳಬೇಕು. ಶ್ರೀಲಂಕಾದಲ್ಲಿ ಏನಾಗುತ್ತಿದೆ, ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದೆ. ಮಿಲಿಟರಿ ಆಡಳಿತ ಸರ್ಕಾರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಆದರೆ ನಮ್ಮ ಭಾರತ ದೇಶ ಸುಂದರ ದೇಶ, ಇದರಿಂದ ಈ ರೀತಿ ಹೋಲಿಕೆ ಮಾಡುವುದು ಸರಿಯಲ್ಲ ಎಂದರು. ಇದನೂ ಓದಿ: ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ ಸೇರಿದ ಭಾಸ್ಕರ್ ರಾವ್
Advertisement
Advertisement
ಇದೇ ವೇಳೆ ರಾಜ್ಯಕ್ಕೆ ಕೇಂದ್ರ ಗೃಹ ಇಲಾಖೆ ಹಾಗೂ ಸಹಕಾರ ಇಲಾಖೆ ಸಚಿವ ಅಮಿತ್ ಶಾ ಬಂದು ಹೋದ ಮೇಲೆ ಬಿಜೆಪಿಗೆ ಹೊಸ ಉತ್ಸಾಹ ಮತ್ತುಷ್ಟು ಶಕ್ತಿ ಬಂದಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು ಸಹಜವಾಗಿ ನಮ್ಮ ನಾಯಕರು ಬಂದಾಗ ರಾಜಕಾರಣದ ವಿಚಾರಗಳನ್ನು ಚರ್ಚೆ ಮಾಡಿ ಹೋಗಿದ್ದಾರೆ. ಇದರಿಂದ ನಮ್ಮಲ್ಲಿ ಮತ್ತಷ್ಟು ಹೊಸ ಚೈತನ್ಯ ಹುರುಪು ಬಂದಿದೆ. ಮೋದಿಯವರು ಸಹ ಬಂದರೆ ನಮಗೆ ಮತ್ತಷ್ಟು ಉತ್ಸಾಹ ಲವಲವಿಕೆ ಹೆಚ್ಚಾಗಲಿದೆ ಎಂದು ಹೇಳಿದರು.
Advertisement
ನಾನು ಬಿಜೆಪಿಗೆ ಯಾವುದೇ ನೀರಿಕ್ಷೆಗಳನ್ನು ಇಟ್ಟುಕೊಂಡು ಬಂದಿಲ್ಲ. ಪಕ್ಷ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಯಾವುದೇ ಹುದ್ದೆ ನೀಡಿದರೂ ಸಮರ್ಪಕವಾಗಿ ನಿಭಾಯಿಸುವೆ ಎಂದು ತಿಳಿಸಿದರು. ಇದನೂ ಓದಿ: ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಅಪಘಾತದಲ್ಲಿ ಸಾವು