ಬೆಂಗಳೂರು: ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ನಮಗೂ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಬಿಜೆಪಿ (BJP) ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ `ದಾರಿದ್ರ್ಯ’ ಅಭಿಪ್ರಾಯಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸುನೀಲ್ ಕುಮಾರ್ ಹೇಳೀಕೆಗೆ ಪ್ರತಿಕ್ರಿಯಿಸಿದ ಅವರು, ಸದನದಲ್ಲಿ ಅವರು ಅಧಿಕೃತ ವಿರೋಧ ಪಕ್ಷ ಅಲ್ಲಿ ಮಾತ್ರ ಕೈ ಜೋಡಿಸಿದ್ದೇವೆ. ಕಾರ್ಯಕರ್ತರಿಗೆ ನಾಡಿನ ಜನರಿಗೆ ಹೇಳೋಕೆ ಬಯಸುತ್ತೇನೆ. ನಮ್ಮ ಪಕ್ಷ ಅವರ ಜೊತೆ ಮೈತ್ರಿ ಮಾಡಿಕೊಂಡಿಲ್ಲ ಭಿಕ್ಷೆ ಬೇಡಿಕೊಂಡು ನಮ್ಮ ಪಕ್ಷ ಹಿಂದೆ ಹೋಗಲ್ಲ. ರಾಜ್ಯಕ್ಕೆ ಕಾಂಗ್ರೆಸ್ ನಿಂದ ಎಷ್ಟು ಹಾನಿ ಆಗಿದೆಯೋ ಬಿಜೆಪಿಯಿಂದಲೂ ಅಷ್ಟೆ ಆಗಿದೆ ಎಂದರು.
ಸುನಿಲ್ ಕುಮಾರ್ ಹೇಳಿದ್ದೇನು..?: ಜೆಡಿಎಸ್ ಜೊತೆಗೆ ಮೈತ್ರಿ ಕೇವಲ ಊಹಾಪೋಹ. ಬಿಜೆಪಿ ನೇತೃತ್ವದ ಎನ್‍ಡಿಎ ಸಭೆಗೆ ಜೆಡಿಎಸ್ ಪಕ್ಷವನ್ನು ಆಹ್ವಾನಿಸಿರಲಿಲ್ಲ. ಅಂತಹ ಚರ್ಚೆ ನಮ್ಮ ಪಕ್ಷದಲ್ಲಿ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಅನಿವಾರ್ಯತೆ ಬಿಜೆಪಿಗೇನೂ ಕಾಣುತ್ತಿಲ್ಲ ಎಂದು ಹೇಳಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]