ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಗುಂಡಿಗೆ ಮತ್ತೊಂದು ಬಲಿಯಾಗಿರೋದಕ್ಕೆ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.
ಜೆಪಿ ಭವನದಲ್ಲಿ ಮಾತನಾಡಿದ ಅವರು, ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಈ ಗುಂಡಿ ಸ್ಥಿತಿ ಇದೆ. ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ. ಇಂತಹ ಕಾನ್ಫರೆನ್ಸ್ ಎಷ್ಟು ಆಗಿದೆ. ಆದರೆ ಗುಂಡಿ ಮಾತ್ರ ಮುಚ್ಚಿಲ್ಲ ಎಂದು ಕಿಡಿಕಾರಿದರು.
Advertisement
Advertisement
ನಾಗರಿಕ ಜೀವನ ಕಾಪಾಡಲು ಕೆಲಸ ಈ ಸರ್ಕಾರ ಮಾಡ್ತಿಲ್ಲ. ಮಳೆ ಬಂದಿರೋದು ನಿಜ. ಕರ್ನಾಟಕದಲ್ಲಿ ಮಾತ್ರ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿ ಈ ಸರ್ಕಾರ ಮಾಡಿಕೊಂಡಿಲ್ಲ. ಓರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿವರ್ಷ ಮಳೆ ಬಂದರು ಎಲ್ಲವೂ ಸರಿ ಮಾಡ್ತಾರೆ. ಆದರೆ ನಮ್ಮಲ್ಲಿ ಅಂತಹ ಕೆಲಸ ಆಗುತ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಕಿಡಿಕಾರಿದರು.
Advertisement
Advertisement
ನಿನ್ನೆ ಅರಸೀಕೆರೆಯಲ್ಲಿ ರಸ್ತೆ ಅಪಘಾತ ಆಯ್ತು. ಸರ್ಕಾರ ಇಡೀ ರಾಜ್ಯದಲ್ಲಿ ಒಂದು ಸರ್ವೇ ಮಾಡಿಸಲಿ. ಹಲವಾರು ರಸ್ತೆಗಳಲ್ಲಿ, ಹೈವೇ ರಸ್ತೆಯಲ್ಲಿ ASI ಸೇರಿ 3-4 ಜನ ಪೊಲೀಸರು ನಿಂತಿರುತ್ತಾರೆ. ಜನರ ವಾಹನಗಳನ್ನು ನಿಲ್ಲಿಸಿ ವಸೂಲಿ ಮಾಡಲು ನಿಂತಿದ್ದಾರೆ. ವಸೂಲಿ ಮಾಡೋಕೆ ಈ ಸರ್ಕಾರ ನಿಂತಿದೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರು ಹಂಚಿಕೊಳ್ಳುತ್ತಾರೆ ಎಂದು ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಶುಕ್ರವಾರ ಪ್ರಾರಂಭ ಆಗಿ ಭಾನುವಾರದವರೆಗೆ ನೀವೇ ಎಲ್ಲದ್ದಕ್ಕೂ ಅವಕಾಶ ಕೊಟ್ಟಿದ್ದೀರಾ. ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋರು ನೀವೇ. ಹೋಟೆಲ್‍ಗೆ ರಾತ್ರಿ ಅನುಮತಿ ಕೋಡೋದು ನೀವು. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡೋರು ನೀವೇ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್
ಕೆ.ಆರ್. ಪೇಟೆಯಲ್ಲಿ ಕುಂಭ ಮೇಳಕ್ಕೆ ಹಾಕಿದ್ದ ಡಾಂಬಾರು ಕಿತ್ತು ಹೋಗಿದೆಯಂತೆ. ಸ್ವಾಮೀಜಿಗಳು ಎಲ್ಲರೂ ಅಲ್ಲೆ ಇದ್ದರು. ಜನ ಇದರಲ್ಲಿ 40% ಅಕ್ರಮ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಈ ಸರ್ಕಾರದ ಕೆಲಸ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ