ಹಾಸನ: ಪುಟ್ಗೋಸಿ ಕರೆಂಟ್ ಎಳೆದಿದ್ದಕ್ಕೆ ಸಿಎಂ ಹಾಗೂ ಡಿಸಿಎಂ ಕಾಂಪಿಟೇಷನ್ ಮೇಲೆ ಅಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದು ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಿಎಂ ಹೆಚ್‍ಡಿಕೆ (H.D Kumaraswamy) ವಾಗ್ದಾಳಿ ನಡೆಸಿದ್ದಾರೆ.
ಚನ್ನರಾಯಪಟ್ಟಣದ ಅತ್ತಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರ ದುಡ್ಡಿಗೆ, ಪೊಗರಿಗೆ ಹಾಗೂ ರೌಡಿಸಂಗೆ ನಾನು ಹೆದರುವವನಲ್ಲ. ಯಾವನೋ ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ. ನಾನು ನಿಂತು ವಿದ್ಯುತ್ ಸಂಪರ್ಕ ಕೊಡಿಸಿದ್ನಾ? ನನ್ನ ಮನೇಲಿ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ. ಸಿಎಂ ಹಾಗೂ ಡಿಸಿಎಂ ಅಧಿಕಾರಿಗಳಿಗೆ ಆದೇಶ ಮಾಡಿ ಕೇಸ್ ಹಾಕಬೇಕು ಎಂದು ನನ್ನ ಮನೆಗೆ ಕಳಿಸಿದ್ದರು. 17 ಯೂನಿಟ್‍ಗೆ 2,000 ರೂ. ಬಿಲ್ ಆಗಿದೆ. 68 ಸಾವಿರ ಕಟ್ಟಿ ಎಂದು ಬಿಲ್ ಕಳಿಸಿದ್ದರು. ಆ ಹಣವನ್ನು ನಾನು ಕಟ್ಟಿದ್ದೇನೆ. ನನ್ನ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಜೊತೆ ದತ್ತಮಾಲೆ ಧರಿಸಲಿದ್ದಾರೆ ಜೆಡಿಎಸ್ ಶಾಸಕರು
Advertisement
Advertisement
ಇದರಿಂದ ಇಲಾಖೆಗಳು ಯಾವ ರೀತಿ ನಡೆಯುತ್ತಿವೆ ಎಂದು ನನಗೊಂದು ಅನುಭವವಾಯಿತು. ನಾನು ಈ ಬಗ್ಗೆ ಕೇಸ್ ಹಾಕ್ತೇನೆ. ಮುಂದೆ ಏನು ಮಾಡ್ಬೇಕೋ ಅದನ್ನು ಮಾಡ್ತೇನೆ. ಕಾಲ ಹೀಗೆ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
Advertisement
ಸಿಎಂ ಮಗನಿಗೆ ಕ್ಷೇತ್ರದಲ್ಲಿ ದರ್ಬಾರ್ ಮಾಡಲು ಸಂವಿಧಾನದ ವ್ಯವಸ್ಥೆಯೊಳಗೆ ಅವಕಾಶ ಇದೆಯೇ? ನಮ್ಮ ಅಪ್ಪನೂ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯೂ ಆಗಿದ್ದರು. ನಮಗೆ ಆ ರೀತಿಯ ಅಧಿಕಾರ ಕೊಟ್ಟಿರಲಿಲ್ಲ. ನಾನು ಶಾಸಕ ಕೆ.ಎಂ ಶಿವಲಿಂಗೇಗೌಡ ಅವರ ದೂರಿನ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.
Advertisement
ಈಗಲೂ ನಾನೇ ರಾಜ್ಯಾಧ್ಯಕ್ಷ ಎಂಬ ಸಿ.ಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ, ಅವರಿಗೆ ಬೋರ್ಡ್ ಹಾಕಿಕೊಂಡು ಓಡಾಡಲು ಹೇಳಿ ಎಂದಿದ್ದಾರೆ.
ನೂತನ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಜನರಿಗೆ ಹೊಸ ಶಕ್ತಿ ಬಂದಿದೆ ಎಂಬ ಭಾವನೆ ಮೂಡಿದೆ. ನೂತನ ರಾಜ್ಯಾಧ್ಯಕ್ಷರು ಯುವಕರಿದ್ದು, ರಾಜ್ಯದೆಲ್ಲೆಡೆ ಓಡಾಡುತ್ತಿದ್ದಾರೆ. ಅವರಿಗೆ ಸಂಘಟನೆಯಲ್ಲಿ ಎಲ್ಲಾ ರೀತಿಯ ಅನುಭವ ಇದೆ. ಮುಂದಿನ ದಿನಗಳಲ್ಲಿ ಜನ ಏನು ತಿರ್ಮಾನ ಮಾಡ್ತಾರೆ ಎಂದು ನೋಡೋಣ. ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪೆನ್‍ಡ್ರೈನ್ ಬಗ್ಗೆ ಕೈ ನಾಯಕರ ಮಾರ್ಮಿಕ ಹೇಳಿಕೆ ವಿಚಾರವಾಗಿ, ನಾನು ಪೆನ್‍ಡ್ರೈವ್ ತೋರಿಸಿದಾಗ ಎಷ್ಟು ಜನ ಮಂತ್ರಿಗಳು ನನಗೆ ಫೋನ್ ಮಾಡಿದ್ದರು. ಎಷ್ಟು ಜನ ನನ್ನ ಹತ್ತಿರ ಬಂದಿದ್ದರು. ಅಣ್ಣಾ ನಿನ್ನ ಋಣದಲ್ಲಿದ್ದೇವೆ ನಿಮ್ಮಿಂದ ಬೆಳೆದಿದ್ದೇವೆ ಎಂದು ಏಕೆ ಹೇಳಿದ್ದರು? ಅವರೆಲ್ಲ ನಿದ್ರೆಗೆಟ್ಟಿದ್ದೇಕೆ? ಹಾವು ಬಿಡದೆ ಇಷ್ಟೆಲ್ಲಾ ನಿದ್ದೆಗೆಟ್ಟಿದ್ದೀರಿ, ಬೆಚ್ಚಿದ್ದೀರಿ ಹಾವು ಬಿಟ್ಟರೆ ಏನಾಗ್ತೀರಾ? ಬಿಡುಗಡೆ ಮಾಡುವವರಿಗೆ ಕಾಯಿರಿ ಎಂದಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗೆ ರಿಲೀಫ್ – ಮಧ್ಯಾಹ್ನ ಬಂಧನ, ಸಂಜೆ ಬಿಡುಗಡೆಗೆ ಆದೇಶ : ಕೋರ್ಟ್‌ನಲ್ಲಿ ಏನಾಯ್ತು?