ಕೊಪ್ಪಳ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ದ್ವೇಷ ಅಸೂಯೆಯಿಂದ ದಿನವೂ ಟೀಕೆ ಮಾಡುತ್ತಿದ್ದಾರೆ. ವಿದ್ಯುತ್ ಕಳ್ಳತನ ಮಾಡಿದವರಿಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ? ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ಕೊಪ್ಪಳದ (Koppal) ಬಸಾಪೂರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಕಳ್ಳತನ ಮಾಡಿ, ದಂಡ ಬೇರೆ ಕಟ್ಟಿದ್ದಾರೆ. ಅವರಿಗೆ ನೈತಿಕತೆ ಇದೆಯಾ? ನನ್ನ ಬಗ್ಗೆ ಮಾತನಾಡಲು ಅವರ ಬಳಿ ಸಾಕ್ಷಿ ಇದೆಯಾ? ಯತೀಂದ್ರ (Yathindra Siddaramaiah) ಫೋನ್‌ನಲ್ಲಿ ದುಡ್ಡಿನ ವ್ಯವಹಾರ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಸೆಂಬರ್ 9ಕ್ಕೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗುತ್ತದೆ: ಸಿಎಂ ಇಬ್ರಾಹಿಂ
Advertisement
Advertisement
ಯತೀಂದ್ರ ಸಿಎಸ್‌ಆರ್ ಫಂಡ್ (CSR Fund) ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ತಮ್ಮ ಕಾಲದಲ್ಲಿ ದುಡ್ಡು ಮಾಡಿರುವುದು ಜಗತ್ತಿಗೇ ಗೊತ್ತಿದೆ. ಗ್ಯಾರಂಟಿ ಯೋಜನೆ ವಿರೋಧ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಇದೀಗ ಯೋಜನೆ ಘೋಷಣೆ ಮಾಡುತ್ತಿದ್ದಾರೆ. ಬಿಜೆಪಿ (BJP) ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿಲ್ಲ. ಈಗ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಬಿಜೆಪಿಯವರು ಯಾವತ್ತೂ ನುಡಿದಂತೆ ನಡೆಯುವುದಿಲ್ಲ. ಇವರ ಮಾತನ್ನು ಜನ ನಂಬುವುದಿಲ್ಲ ಎಂದರು. ಇನ್ನು ಮಾಜಿ ಸಚಿವ ಶ್ರೀರಾಮುಲು ಮಗಳ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದರು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಹೆಚ್‍ಡಿಕೆ ಸ್ವಾಮಿಯೇ ಅಯ್ಯಪ್ಪ ಅಂತಿಲ್ಲ, ಅಮಿತ್ ಅಯ್ಯಪ್ಪ ಅಂತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ
Advertisement