ಬೆಂಗಳೂರು: ಜೆಡಿಎಸ್ ಬಗ್ಗೆ ಸಿಎಂ ಇಬ್ರಾಹಿಂ ಅವರಿಗೆ ಪ್ರೀತಿ ವಿಶ್ವಾಸ ಇದೆ. ಅವರು ಜೆಡಿಎಸ್‍ಗೆ ಬಂದರೆ ಉತ್ತಮ ಸ್ಥಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಜೊತೆ ಮಾತಾಡಿದ್ದೇನೆ. ಈ ಹಿಂದೆ ನಮ್ಮ ಪಕ್ಷದಲ್ಲಿ ಇದ್ದರು. ದೇವೇಗೌಡರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದರು. ನಾನು 3-4 ಬಾರಿ ಭೇಟಿ ಆಗಿದ್ದೆ. ಕಾಂಗ್ರೆಸ್‍ನಲ್ಲಿ ವಿಪಕ್ಷ ಸ್ಥಾನದ ಸಿಕ್ಕರೆ ಅಲ್ಲೆ ಇರಿ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡರು.
Advertisement
Advertisement
ಈ ಬಗ್ಗೆ ಅನೇಕ ಬಾರಿ ಇಬ್ರಾಹಿಂ ಜೊತೆ ಮಾತಾಡಿದ್ದೇವೆ. ಅವರು ಜೆಡಿಎಸ್‍ಗೆ ಬಂದ್ರೆ ಸ್ವಾಗತ. ಈ ಬಗ್ಗೆ ಅವರು ನಿರ್ಧಾರ ಮಾಡಲಿ ಎಂದು ಜೆಡಿಎಸ್‍ಗೆ ಆಹ್ವಾನ ನೀಡಿದರು.
Advertisement
ಮತ್ತೆ ಒಂದಾಗಲ್ಲ: ಜನತಾ ಪರಿವಾರ ಮತ್ತೆ ಒಗ್ಗೂಡಿಸಲು ಸಾಧ್ಯವಿಲ್ಲ. ಈಗ ಎಲ್ಲರೂ ಬೇರೆ ಬೇರೆ ಕಡೆ ಹೋಗಿದ್ದಾರೆ. ಹೊಸ ನಾಯಕತ್ವ ಬೆಳೆಸುವ ಶಕ್ತಿ ಕಾರ್ಯಕರ್ತರಲ್ಲಿ ಇದೆ. ಹೊಸ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
Advertisement
ಮನೆ ಬಾಗಿಲಿಗೆ ಹೋಗಲ್ಲ: ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಹೋಗಲು ಜೆಡಿಎಸ್ ಸಿದ್ಧವಿಲ್ಲ. ಈಗಲೂ ಹೋಗಿಲ್ಲ ಮುಂದೆಯೂ ಹೋಗಲ್ಲ. ಅತಂತ್ರ ಸ್ಥಿತಿ ಬಂದಾಗಲೂ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. 123 ಸ್ಥಾನ ಗೆಲ್ಲಲು ನಾನು ಸಂಘಟನೆ ಹಾಗೂ ಶ್ರಮ ವಹಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಅಂತಂತ್ರ ಆದಾಗ ಸ್ವತಂತ್ರ ರಾಗ್ತಾರೆ ಎಂದಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರು ಅಂತಂತ್ರರಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ. ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ
ಬಿಜೆಪಿ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿ ಇಲ್ಲ. ಅವರನ್ನೇ ಹದ್ದು ಬಸ್ತಲ್ಲಿ ಇಟ್ಟುಕೊಳ್ಳಲು ಬಿಜೆಪಿಗೆ ಆಗಿಲ್ಲ. ಅವರ ಪಕ್ಷದ ಉಳಿವಿಗಾಗಿ ಏನು ಮಾಡುತ್ತಿದ್ದಾರೋ ಹಾಗೇ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.