Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೈಗಾರಿಕಾ, ಖನಿಜ ಪಾಲುದಾರಿಕೆ ವಿಸ್ತರಿಸಲು ಯುಎಇ ಉನ್ನತಾಧಿಕಾರಿಗಳೊಂದಿಗೆ ಹೆಚ್‌ಡಿಕೆ ಮಾತುಕತೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕೈಗಾರಿಕಾ, ಖನಿಜ ಪಾಲುದಾರಿಕೆ ವಿಸ್ತರಿಸಲು ಯುಎಇ ಉನ್ನತಾಧಿಕಾರಿಗಳೊಂದಿಗೆ ಹೆಚ್‌ಡಿಕೆ ಮಾತುಕತೆ

Latest

ಕೈಗಾರಿಕಾ, ಖನಿಜ ಪಾಲುದಾರಿಕೆ ವಿಸ್ತರಿಸಲು ಯುಎಇ ಉನ್ನತಾಧಿಕಾರಿಗಳೊಂದಿಗೆ ಹೆಚ್‌ಡಿಕೆ ಮಾತುಕತೆ

Public TV
Last updated: July 1, 2025 9:06 pm
Public TV
Share
5 Min Read
H D Kumaraswamy
SHARE

– ಗ್ರೀನ್ ಸ್ಟೀಲ್, ಉನ್ನತ ದರ್ಜೆಯ ಅಲ್ಯೂಮಿನಿಯಂ; ಭಾರತ-ಯುಎಇ ಸಹಯೋಗಕ್ಕೆ ಒತ್ತು

ದುಬೈ: ದುಬೈ ಪ್ರವಾಸದಲ್ಲಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ ಉನ್ನತ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

H D Kumaraswamy 1

ಈ ಕುರಿತಂತೆ ಯುಎಇ ಹಣಕಾಸು ಸಚಿವ ಹೆಚ್.ಇ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಇದರಲ್ಲಿ ವ್ಯಾಪಾರ ವಿಸ್ತರಣೆ, ಸಂಪನ್ಮೂಲಗಳ ಖಾತರಿ ಮತ್ತು ಉಕ್ಕು ಹಾಗೂ ಅಲ್ಯೂಮಿನಿಯಂನಲ್ಲಿ ಸಹಯೋಗ, ನಾವೀನ್ಯತೆಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಇಂಡಸ್ಟ್ರಿಯಲ್ಲಿ ನನಗೆ ಯಾರೂ ಫ್ರೆಂಡ್ಸ್ ಇಲ್ಲ… ಹೀಗ್ಯಾಕಂದ್ರು ನಯನತಾರ..?

Had a productive meeting with H.E. Abdulla Bin Touq Al Marri, UAE’s Minister of Economy, to deepen India-UAE industrial and trade cooperation.

We discussed collaboration in green steel production, aligning with our shared vision for sustainable industrial growth. UAE can play a… pic.twitter.com/QsYW5hoOAu

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 1, 2025

ಉಕ್ಕು ಹಾಗೂ ಅಲ್ಯೂಮಿನಿಯಂ ಕುರಿತಾಗಿ ಮಾತುಕತೆ ನಡೆಸಿದ ಅವರು, ಗ್ರೀನ್ ಸ್ಟೀಲ್, ಉನ್ನತ ದರ್ಜೆಯ ಅಲ್ಯೂಮಿನಿಯಂ ಕುರಿತ ಭಾರತ ಹಾಗೂ ಯುಎಇ ನಡುವಿನ ದೀರ್ಘಕಾಲೀನ ಸಹಯೋಗಕ್ಕೆ ಒತ್ತು ನೀಡಲಾಗಿದೆ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನ ದುರಂತ | ಮೃತಪಟ್ಟ ಬ್ರಿಟನ್ ಪ್ರಜೆಗಳ ಕುಟುಂಬಸ್ಥರಿಂದ ಏರ್‌ ಇಂಡಿಯಾ ವಿರುದ್ಧ ಯುಕೆ, ಯುಎಸ್‍ನಲ್ಲಿ ದೂರು ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಅವರು, 2030ರ ಹೊತ್ತಿಗೆ ದೇಶೀಯವಾಗಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಕ್ರಮಗಳ ಮೂಲಕ ಮುನ್ನಡೆಯುತ್ತಿದೆ ಎಂದು ಒತ್ತಿ ಹೇಳಿದ್ದಾರೆ.

ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಸ್ಥಿತಿ ಸ್ಥಾಪಕತ್ವ, ಸಂಪನ್ಮೂಲಗಳ ಖಾತರಿ ಮತ್ತು ಸುರಕ್ಷತೆ, ನಾವೀನ್ಯತೆ ಚಾಲಿತ ಬಲವಾದ ಜಾಗತಿಕ ಕೈಗಾರಿಕಾ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಗುರಿ ಮುಟ್ಟಲು ಭಾರತವು ಜಾಗತಿಕವಾಗಿ ಉತ್ತಮ ಪಾಲುದಾರರತ್ತ ಕೈ ಚಾಚಿದೆ ಎಂದು ದ್ವಿಪಕ್ಷೀಯ ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವ ಅವಕಾಶವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಶಿವಕುಮಾರ್‌ ಸಿಎಂ ಆಗ್ತಾರೆ ಎಂದಿದ್ದ ಇಕ್ಬಾಲ್‌ ಹುಸೇನ್‌ಗೆ ವಾರ್ನಿಂಗ್‌ – ಡಿಕೆಶಿಯಿಂದ ನೋಟಿಸ್‌

ಹಸಿರು ಉಕ್ಕು, ಹೆಚ್ಚಿನ ಮೌಲ್ಯದ ಉತ್ಪಾದನೆ, ಜಾಗತಿಕ ಪೂರೈಕೆ ಮತ್ತು ಸರಪಳಿ ಸ್ಥಿತಿ ಸ್ಥಾಪಕತ್ವಕ್ಕಿರುವ ರಾಷ್ಟ್ರದ ಬದ್ಧತೆಯನ್ನು ವಿವರಿಸಿದ್ದಾರೆ. ಅಲ್ಲದೇ ಭಾರತ ಮತ್ತು ಯುಎಇಯು ಹಸಿರು ಉಕ್ಕು ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಬಲವಾದ ಪಾಲುದಾರರಾಗಬಹುದು ಹೇಳಿದ್ದಾರೆ.

2030ರ ವೇಳೆಗೆ ಭಾರತವು ತನ್ನ 300 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಗುರಿಯನ್ನು ತಲುಪಲು ಸಹಾಯ ಮಾಡುವಲ್ಲಿ ಯುಎಇ ಪ್ರಮುಖ ಪಾತ್ರವಹಿಸಬಹುದು. ವಿಶೇಷವಾಗಿ ಕಚ್ಚಾ ವಸ್ತುಗಳ ಖಾತರಿಯನ್ನು ಬೆಂಬಲಿಸುವ ಮೂಲಕ ಮತ್ತು ಇಂಧನ ಪೂರೈಕೆ, ಸಮರ್ಥ ಉತ್ಪಾದನಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಜೊತೆ ಕೈ ಜೋಡಿಸಬಹುದು. ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಮೋಹನ್‌ಲಾಲ್ ಮಗಳು ವಿಸ್ಮಯ ಚಿತ್ರರಂಗಕ್ಕೆ ಎಂಟ್ರಿ!

ಉನ್ನತ ದರ್ಜೆಯ ಉಕ್ಕು ಮತ್ತು ಅಲ್ಯೂಮಿನಿಯಂ
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ಮತ್ತು ಕಾರ್ಯತಂತ್ರದ ವಲಯಗಳಿಗೆ ಅತ್ಯಗತ್ಯವಾದ ಉನ್ನತ ದರ್ಜೆಯ ಉಕ್ಕು ಮತ್ತು ಅಲ್ಯೂಮಿನಿಯಂನ ಜಂಟಿ ಅಭಿವೃದ್ಧಿಯು ಚರ್ಚೆಯ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ಆಟೋಮೊಬೈಲ್, ಚಲನಶೀಲತೆ ಮತ್ತು ಉನ್ನತ ಮಟ್ಟದ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಬಳಕೆಗಾಗಿ ಉತ್ತಮ ಗುಣಮಟ್ಟದ ಉಕ್ಕು ಮತ್ತು ಅಲ್ಯೂಮಿನಿಯಂ ಅನ್ನು ಜಂಟಿಯಾಗಿ ಉತ್ಪಾದಿಸುವ ಮತ್ತು ವ್ಯಾಪಾರ ಮಾಡುವಲ್ಲಿ ನಾವು ಸ್ಪಷ್ಟವಾದ ಪಾಲುದಾರಿಕೆಯನ್ನು ಎದುರು ನೋಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: I Love You ಅನ್ನೋದ್ರಲ್ಲಿ ಲೈಂಗಿಕ ಉದ್ದೇಶವಿಲ್ಲ – ಬಾಂಬೆ ಹೈಕೋರ್ಟ್‌

ಸಾರ್ವಜನಿಕ ವಲಯದ ಉದ್ಯಮಗಳ ತೊಡಗಿಸಿಕೊಳ್ಳುವಿಕೆ
ಭಾರತ-ಯುಎಇ ಕೈಗಾರಿಕಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಭಾರತದ ಸಾರ್ವಜನಿಕ ವಲಯದ ಉದ್ಯಮಗಳ (CPSI) ಸಕ್ರಿಯ ಪಾತ್ರವನ್ನು ಈ ಮಾತುಕತೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಿದ್ದಾರೆ. ಮಹಾರತ್ನ ಸಿಪಿಎಸ್‌ಇ ಆಗಿರುವ ಎಸ್‌ಎಐಎಲ್, ಪ್ರಸ್ತುತ ರಾಸ್ ಅಲ್ ಖೈಮಾದ ಸ್ಟೀವಿನ್ ರಾಕ್ ಎಲ್‌ಎಲ್‌ಸಿಯಿಂದ ವಾರ್ಷಿಕವಾಗಿ ಸುಮಾರು 2.5 ಮಿಲಿಯನ್ ಟನ್ ಕಡಿಮೆ ಸಿಲಿಕಾ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತದೆ. ಕಂಪನಿಯು ದೀರ್ಘಾವಧಿಯ ಪೂರೈಕೆ ಒಪ್ಪಂದಗಳು, ಯುಎಇಯ ಮೂಲಸೌಕರ್ಯ ಮತ್ತು ಕೈಗಾರಿಕಾ ವಲಯಗಳಿಗೆ ಪ್ರೀಮಿಯಂ ಭಾರತೀಯ ಉಕ್ಕಿನೊಂದಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಅನ್ವೇಷಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಲ ಬಿಜೆಪಿಯವರು ಸಿಎಂ ಮಾತ್ರ ಅಲ್ಲ, ಪ್ರಧಾನಿಯನ್ನು ಬದಲಾವಣೆ ಮಾಡಬೇಕೆಂದು ಕೇಳ್ತಿದ್ದಾರೆ: ಸಂತೋಷ್ ಲಾಡ್

ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆ ರಾಷ್ಟ್ರೀಯ ಖನಿಜಾಭಿವೃದ್ಧಿ ಸಂಸ್ಥೆ (NMDC), ಗಣಿಗಾರಿಕೆ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸುವಲ್ಲಿ ಯುಎಇ ಮೂಲದ ಸಂಸ್ಥೆಗಳೊಂದಿಗೆ ಸಹಕರಿಸಲು ಉತ್ಸುಕವಾಗಿದೆ. ಭಾರತದ ಪ್ರಮುಖ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾದ ಮೆಕಾನ್ (MECON), ಕೊಲ್ಲಿ ಭಾಗದಲ್ಲಿ ತೈಲ ಮತ್ತು ಅನಿಲ, ಉಕ್ಕು ಸ್ಥಾವರ ಅಭಿವೃದ್ಧಿ ಮತ್ತು ಸ್ಮಾರ್ಟ್ ಮೂಲಸೌಕರ್ಯ ಯೋಜನೆಗಳಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಮೂರು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಾದ ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಮತ್ತು ಮೆಕಾನ್ ಇದೀಗ ದುಬೈನಲ್ಲಿ ಅಂತಾರಾಷ್ಟ್ರೀಯ ಕಚೇರಿಗಳನ್ನು ತೆರೆದಿವೆ. ವ್ಯಾಪಾರ ಸಮನ್ವಯ, ಜಂಟಿ ಉದ್ಯಮಗಳು ಮತ್ತು ತಂತ್ರಜ್ಞಾನ ವಿನಿಮಯಕ್ಕಾಗಿ ಶಾಶ್ವತ ವೇದಿಕೆಯನ್ನು ಸ್ಥಾಪಿಸಿವೆ ಎಂದಿದ್ದಾರೆ. ಇದನ್ನೂ ಓದಿ: `ರಾಮ್‌ಚರಣ್‌ಗೆ ಚಿತ್ರ ಮಾಡಿ ಕೆಟ್ಟೆ’ ಎಂದ ಪ್ರೊಡ್ಯೂಸರ್

ಜಂಟಿ ಕಾರ್ಯಪಡೆ ರಚನೆ
ನಿರ್ದಿಷ್ಟ ಅವಕಾಶಗಳನ್ನು ಗುರುತಿಸಲು, ಸಂಚಾರ ಸೌಕರ್ಯಗಳನ್ನು ಸುಗಮಗೊಳಿಸಲು ಮತ್ತು ಪ್ರಮುಖ ವಲಯಗಳಲ್ಲಿ ದೀರ್ಘಕಾಲೀನ ಸಹಯೋಗವನ್ನು ಉತ್ತೇಜಿಸಲು ಭಾರತೀಯ ಮತ್ತು ಯುಎಇ ಪಾಲುದಾರರ ನಡುವೆ ಜಂಟಿ ಕಾರ್ಯಪಡೆಯನ್ನು ರಚಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಭಾರತವು ಯುಎಇಯನ್ನು ಕೇವಲ ಮಾರುಕಟ್ಟೆಯನ್ನಾಗಿ ನೋಡುವುದಿಲ್ಲ. ಬದಲಾಗಿ ಜಾಗತಿಕ ಕೈಗಾರಿಕಾ ಭೂಪಟವನ್ನು ಮರು ರೂಪಿಸುವಲ್ಲಿ ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ – ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ

5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಭಾರತದ ಗುರಿಯೊಂದಿಗೆ ಹೊಂದಿಕೆಯಾಗುವ ಜಂಟಿ ಯೋಜನೆಗಳು ಮತ್ತು ವ್ಯಾಪಾರ ಚೌಕಟ್ಟುಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ದುಬೈ ಸಹಕಾರವನ್ನು ವಿಸ್ತೃತ ಮಟ್ಟದಲ್ಲಿ ಪಡೆದುಕೊಳ್ಳುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯವಾಯಿತು.

TAGGED:dubaiGreen Steelhd kumaraswamyIndia-UAEದುಬೈಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

The Devil
ʻದಿ ಡೆವಿಲ್‌ʼ ರಿಲೀಸ್‌ಗೆ ಕ್ಷಣಗಣನೆ – ಪ್ರೀತಿಯ ಸೆಲೆಬ್ರಿಟಿಸ್‌ಗೆ ಜೈಲಿಂದಲೇ ʻದಾಸʼನ ಸಂದೇಶ; ಪತ್ರದಲ್ಲಿ ಏನಿದೆ?
Cinema Latest Sandalwood Top Stories
Mahakavi Movies 2
ಬರಗೂರರ 25ನೇ ಸಿನಿಮಾ ‘ಮಹಾಕವಿ’ ಶೂಟಿಂಗ್ ಮುಕ್ತಾಯ
Cinema Latest Sandalwood
Malashri Shirdi Sai Baba
ಶಿರಡಿ ಸಾಯಿಬಾಬಾನಿಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ
Cinema Latest Sandalwood Top Stories
Rukmini Vasanth
ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂತಾರದ ಕನಕಾವತಿ
Cinema Latest Sandalwood Top Stories

You Might Also Like

daily horoscope dina bhavishya
Astrology

ದಿನ ಭವಿಷ್ಯ: 11-12-2025

Public TV
By Public TV
7 hours ago
toor dal
Bengaluru City

ರಾಜ್ಯದ ರೈತರಿಗೆ ಗುಡ್‌ನ್ಯೂಸ್‌; ಬೆಂಬಲ ಬೆಲೆಯಲ್ಲಿ ತೊಗರಿ ಬೇಳೆ ಖರೀದಿಗೆ ಕೇಂದ್ರ ಅಸ್ತು

Public TV
By Public TV
7 hours ago
Parappana agrahara 1
Bengaluru City

ಪರಪ್ಪನ ಅಗ್ರಹಾರ ಜೈಲಿನ ಮೇಲೆ 6 ಬಾರಿ ದಾಳಿ – 67 ಮೊಬೈಲ್‌, ಸಿಮ್ ಕಾರ್ಡ್ ಪತ್ತೆ

Public TV
By Public TV
7 hours ago
MURUGHA SHREE
Chitradurga

ಪೋಕ್ಸೋ ಕೇಸ್‌ನಲ್ಲಿ ಮುರುಘಾ ಶ್ರೀ ಖುಲಾಸೆ – ಆದೇಶ ಪ್ರಶ್ನಿಸಿ ಬಾಲಕಿಯರಿಂದ ಹೈಕೋರ್ಟ್‌ಗೆ ಮೇಲ್ಮನವಿ

Public TV
By Public TV
9 hours ago
R Ashok Legislative Assembly
Belgaum

ಕಾಂಗ್ರೆಸ್ ನಾಯಕತ್ವ ಗೊಂದಲ: ಇಲ್ಲಿ ಗೋವು ಯಾರು, ಹುಲಿ ಯಾರು? – ಅಶೋಕ್ ವ್ಯಂಗ್ಯ

Public TV
By Public TV
9 hours ago
Eshwar Khandre
Belgaum

ಕುದುರೆಮುಖ ಅರಣ್ಯದಿಂದ ಕುಟುಂಬಗಳ ಸ್ಥಳಾಂತರ: ಈಶ್ವರ್ ಖಂಡ್ರೆ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?