ಬೆಂಗಳೂರು: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ನೀವೇ ನಮ್ಮ ಕುಟುಂಬಕ್ಕೆ ದೇವರು ಅಂತ ಹೇಳಿದ ಕುಟುಂಬವೊಂದರ ಮಾತಿನಿಂದ ಭಾವುಕರಾಗಿ ಹೆಚ್‍ಡಿಕೆ ಕಣ್ಣೀರು ಹಾಕಿದ್ರು.
Advertisement
ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಆಟೋ, ಕಾರು, ಲಾರಿ ಚಾಲಕರು ಮತ್ತು ಮಾಲೀಕರ ಸಂವಾದದ ವೇಳೆ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಹೊಸಕೋಟೆಯ ಎಮ್ಮಂಡಹಳ್ಳಿಯ ಕಾರು ಚಾಲಕ ಸಂಪಂಗಿ ಮತ್ತು ಸಂಧ್ಯಾರಾಣಿ ದಂಪತಿಯ 11 ವರ್ಷ ಮಗಳು ಮೊನಿಕಾಗೆ ರೋಗನಿರೋಧಕ ಶಕ್ತಿ ಇರ್ಲಿಲ್ಲ. ಎಷ್ಟು ಚಿಕಿತ್ಸೆ ಕೊಡಿಸಿದ್ರೂ ಏನೂ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆವು. ಆಗ ನೆರವಿಗೆ ಬಂದ ಹೆಚ್‍ಡಿ ಕುಮಾರಸ್ವಾಮಿ 30 ಲಕ್ಷ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ರು. ಅವರೇ ನಮ್ಮ ಕುಟುಂಬಕ್ಕೆ ದೇವರು ಅಂತ ಮೋನಿಕಾ ತಂದೆ ಸಂಪಂಗಿ ಹೇಳಿದ್ರು. ತಮ್ಮಿಂದ ಸಹಾಯ ಪಡೆದ ಕುಟುಂಬದ ಮಾತು ಕೇಳಿ ಕುಮಾರಸ್ವಾಮಿ ಕಣ್ಣಾಲಿಗಳು ಒದ್ದೆ ಆದವು.
Advertisement
Advertisement
ಸಂವಾದದ ವೇಳೆ ಮಾತನಾಡಿದ ಹೆಚ್‍ಡಿಕೆ, ಚಾಲಕರಿಗೆ ಪ್ರತ್ಯೇಕ ಸಂಸ್ಥೆ ಮಾಡಲು ಪ್ಲಾನ್ ಇದೆ. ಓಲಾ, ಊಬರ್ ನಂತೆ ಸಂಸ್ಥೆ ನಿರ್ಮಿಸಲು ಹೊಸ ಪ್ಲ್ಯಾನ್ ಇದೆ. ಆದ್ರೆ ನಾನು ಏಕಾಂಗಿ, ಪಕ್ಷ ಬೇರೆ ಕಟ್ಟಬೇಕು. ನಾನು ದೇವೇಗೌಡರು ಮಾತ್ರ ಪಕ್ಷ ಕಟ್ಟಬೇಕು ಎಂದರು. ಟ್ಯಾಕ್ಸಿ ಚಾಲಕರಿಗೆ ಉತ್ತಮ ಬದುಕು ನಿರ್ಮಿಸಿಕೊಡಲು ಸಂಸ್ಥೆ ಆರಂಭಿಸಬೇಕು. ಜೆಡಿಎಸ್ ಸರ್ಕಾರ ಬರಲಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ರು.