ರಾಮನಗರ: ಡಿಕೆ ಶಿವಕುಮಾರ್ ಅವರನ್ನ ನೋಡಿದ ತಕ್ಷಣ ಹೆಚ್‌ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಹೊಟ್ಟೆ ತೊಳಸಿದಂತೆ ಆಗುತ್ತದೆ ಎಂದು ಹೆಚ್‌ಡಿಕೆ ವಿರುದ್ಧ ಸಚಿವ ಹೆಚ್.ಸಿ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.
ಎಫ್‌ಐಆರ್ ಆದರೂ ನೈಸ್ ರಸ್ತೆ ಟೋಲ್ ನೀಡಬೇಡಿ ಎಂದು ಹೇಳಿಕೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಿ ಹೇಗೆ ಮಾತನಾಡಬೇಕು ಎಂಬ ಅರಿವು ಕುಮಾರಸ್ವಾಮಿಗಿಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹಾದಿ-ಬೀದಿಯಲ್ಲಿ ಹೋಗುವವರ ರೀತಿ ಮಾತನಾಡಬಾರದು. ಧೈರ್ಯವಿದ್ದರೆ ಕೋರ್ಟ್ಗೆ ಹೋಗಿ ಟೋಲ್ ತಡೆಯುವಂತೆ ಆದೇಶ ತರಲಿ. ದೆಹಲಿಯಲ್ಲಿ ಕೆಲಸ ಮಾಡಲು ಅವರನ್ನು ಜನ ಕಳುಹಿಸಿದ್ದಾರೆ. ಆದರೆ ಅವರು ಬೆಳಿಗ್ಗೆಯಾದರೆ ರಾಜ್ಯದಲ್ಲೇ ಬಂದು ಕೂರುತ್ತಿದ್ದಾರೆ. ನಿಜಕ್ಕೂ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದಲೇ ಆದೇಶ ಹೊರಡಿಸಿ ಟೋಲ್ ಬಂದ್ ಮಾಡಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ – ಪ್ರಮುಖ ಆರೋಪಿ ನ್ಯಾಯಾಂಗ ಬಂಧನಕ್ಕೆ, ನಾಲ್ವರು ಪೇದೆ ಅಮಾನತು
ಮುಖ್ಯಮಂತ್ರಿಗಳಿಗೆ ಕೆಟ್ಟ ಹೆಸರು ತರುವುದೇ ಅವರ ಮುಖ್ಯ ಉದ್ದೇಶವಾಗಿದೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿರುವುದು ಕುಮಾರಸ್ವಾಮಿಯವರಿಗೆ ಹೊಟ್ಟೆಯುರಿ ತರಿಸುತ್ತಿದೆ. ನೈಸ್ ರಸ್ತೆ ವಿಚಾರವಾಗಿ ಪರಿಶೀಲನೆ ನಡೆಸಲು ಮುಖ್ಯಮಂತ್ರಿಗಳು ಕಮಿಟಿ ಮಾಡಿದ್ದು, ಅದರಲ್ಲಿ ನಾನು ಸಚಿವರಾದ ಚಲುವರಾಯಸ್ವಾಮಿ ಮತ್ತು ಡಾ.ಜಿ. ಪರಮೇಶ್ವರ್ ಇದ್ದೇವೆ. ಸಮಿತಿಯ ವರದಿ ಬಂದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಇದನ್ನೂ ಓದಿ: 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ – ಕೆ.ಎಸ್ ಲತಾಕುಮಾರಿ ವಿರುದ್ಧ ಹೆಚ್.ಡಿ.ರೇವಣ್ಣ ಕೆಂಡಾಮಂಡಲ
ಸಚಿವ ನಾಗೇಂದ್ರ ವಿರುದ್ಧ ಸಿಬಿಐ ಪ್ರಾಸಿಕ್ಯೂಷನ್ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ನಮ್ಮ ನಾಯಕರ ವಿರುದ್ಧವೂ ತನಿಖಾ ಸಂಸ್ಥೆಗಳನ್ನು ಬಳಸಲಾಗಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಜಾಗೊಂಡಿತು. ವಿಪಕ್ಷಗಳು ಚರ್ಚೆಗೆ ಬರದೆ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿವೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಪಿಯು ವಿದ್ಯಾರ್ಥಿಗಳಿಗೂ ಉಚಿತ ನೋಟ್‌ಬುಕ್ – ಮಧು ಬಂಗಾರಪ್ಪ
ಇನ್ನೂ ಬಿಡದಿ ಟೌನ್‌ಶಿಪ್ ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿದೆ. ಸಮಿತಿಯು ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು. ಇದನ್ನೂ ಓದಿ: IAS ಅಧಿಕಾರಿ ಐಟಿ, ಇಡಿ ಭಯದಿಂದ ಎಸ್ಕೇಪ್ ಆಗಿಲ್ಲ, ತಂದೆ ನೋಡೋಕೆ ಹೋಗಿದ್ದಾರೆ: ಪ್ರಿಯಾಂಕ್ ಖರ್ಗೆ

