– ಎಲ್ಲ ಸಹಿಸಿಕೊಂಡು ಸುಮ್ಮನಿದೆಯಾ ಕಾಂಗ್ರೆಸ್
ಹಾಸನ: ಸಮ್ಮಿಶ್ರ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಒಂದು ಅಸಮಾಧಾನ ಇದ್ದೇ ಇದೆ. ಎಚ್‍ಡಿಕೆ ಕೇವಲ ರಾಮನಗರ, ಹಾಸನ ಮಂಡ್ಯಕ್ಕೆ ಮಾತ್ರ ಸಿಮೀತಾನಾ ಅನ್ನೋ ಪ್ರಶ್ನೆ ಹಲವಾರು ಬಾರಿ ಎದ್ದಿದೆ.
ಅದೇ ರೀತಿ ಆ ಮೂರು ಜಿಲ್ಲೆಗಳಿಗೆ ಅನುದಾನದ ಹೊಳೆ ಹರಿದು ಹೋಗ್ತಿರೋದಕ್ಕೂ ಹಲವು ಟೀಕೆಗಳು ಎದ್ದಿವೆ. ಅಲ್ಲದೇ ಎಲ್ಲ ನೋಡಿಕೊಂಡು ಕಾಂಗ್ರೆಸ್ ಸುಮ್ಮನಿರುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದಲ್ಲಿ ರೇವಣ್ಣ ಸೂಪರ್ ಸಿಎಂ, ಅವರ ಮಾತಿನಂತೆ ಸಿಎಂ ನಡೆಯುತ್ತಾರೆ ಅನ್ನೋ ಆರೋಪ ಸಹ ಇದೆ. ಇದನ್ನೂ ಓದಿ: ಹಾಸನಲ್ಲಿ ರಸ್ತೆ ಕಾಮಗಾರಿಗಳಿಗೆ ಗಡ್ಕರಿ ಶಂಕುಸ್ಥಾಪನೆ
Advertisement
Advertisement
ಹಾಸನಕ್ಕೆ ಕೊಟ್ಟಿರುವ ಅನುದಾನ..!
* ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ 142 ಕೋಟಿ ರುಪಾಯಿ ವೆಚ್ಚದ 450 ಹಾಸಿಗೆಯ ಆಸ್ಪತ್ರೆ
* 50 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ರೂಪಾಯಿ
* 30 ಕೋಟಿ ವೆಚ್ಚದ ಪೆರಿಫೆರಲ್ ರಿಂಗ್ ರೋಡ್
Advertisement
* ಹೊಳೆನರಸೀಪುರದಲ್ಲಿ 16.15 ಕೋಟಿ ವೆಚ್ಚದ ಮಹಿಳಾ ಪಾಲಿಟೆಕ್ನಿಕ್
* 18.25 ಕೋಟಿ ವೆಚ್ಚದ ಕ್ಯಾನ್ಸರ್ ಕೇರ್ ಟೇಕರ್ ಘಟಕ ಸ್ಥಾಪನೆ
* ಹರದನಹಳ್ಳಿಯಲ್ಲಿ ಮಹಿಳಾ ಕಾಲೇಜಿಗೆ 15 ಕೋಟಿ
Advertisement
* ಹೇಮಾವತಿ ಜಲಾಶಯ ಅಭಿವೃದ್ದಿಗೆ ಹಣ ಬಿಡುಗಡೆ
* ಬೇಲೂರು ಸಮೀಪ ಯಗಚಿ ಜಲಾಶಯಕ್ಕೆ ಹಣ ಬಿಡುಗಡೆ
* ಚನ್ನರಾಯಪಟ್ಟಣದ ಕೆರೆ ಅಭಿವೃದ್ದಿಗೆ ಹಣ ಬಿಡುಗಡೆ
ರಾಮನಗರಕ್ಕೆ ಕೊಟ್ಟಿರುವ ಅನುದಾನ..!
* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
* ಫಿಲ್ಮ್ ಸಿಟಿ ನಿರ್ಮಾಣಕ್ಕೆ 110 ಕೋಟಿ
* ಚನ್ನಪಟ್ಟಣ ಕೆರೆ ಅಭಿವೃದ್ದಿಗೆ ಹಣ ಬಿಡುಗಡೆ
* ರಾಮನಗರದಲ್ಲಿ 40 ಕೋಟಿ ರುಪಾಯಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ರಾಮನಗರದಲ್ಲಿ ಆರ್ಟ್ ಅಂಡ್ ಕ್ರಾಫ್ಟ್ ವಿಲೇಜ್ ಅಭಿವೃದ್ದಿಗೆ ಹಣ ಬಿಡುಗಡೆ
* ಚನ್ನಪಟ್ಟಣದ ರೇಷ್ಮೆ ಕೈಗಾರಿಕಾ ಘಟಕ ಪುನಶ್ಚೇತನಕ್ಕೆ 5 ಕೋಟಿ
ಮಂಡ್ಯಕ್ಕೆ ಕೊಟ್ಟಿರುವ ಅನುದಾನ..!
* ವೈದ್ಯಕೀಯ ಕಾಲೇಜು ಅಭಿವೃದ್ದಿಗೆ 30 ಕೋಟಿ ರೂಪಾಯಿ
* ಮಂಡ್ಯ ನಗರದ ಅಭಿವೃದ್ದಿಗೆ 50 ಕೋಟಿ ರೂಪಾಯಿ
* ಗಗನಚುಕ್ಕಿ, ಭರಚುಕ್ಕಿ ಜಲಪಾತ ಪ್ರವಾಸಿ ತಾಣ ಅಭಿವೃದ್ದಿಗೆ 5 ಕೋಟಿ ರೂಪಾಯಿ
* ಮಂಡ್ಯ ಜಿಲ್ಲೆಯ ಸಮಗ್ರ ಕುಡಿಯುವ ನೀರಿಗೆ 30 ಕೋಟಿ ರೂಪಾಯಿ
* ಬೃಂದಾವನದಲ್ಲಿ ಡಿಸ್ನಿ ಲ್ಯಾಂಡ್ ನಿರ್ಮಾಣಕ್ಕೆ ಸಾವಿರ ಕೋಟಿಗು ಹೆಚ್ಚು ಅನುದಾನ ಸಾಧ್ಯತೆ
ಒಟ್ಟಿನಲ್ಲಿ ಎಚ್‍ಡಿಕೆ ರಾಮನಗರ, ಹಾಸನ, ಮಂಡ್ಯಕ್ಕೆ ಮಾತ್ರ ಸಿಎಂ ಅನ್ನೋದಕ್ಕೆ ಈ ಮೇಲೆ ನೀಡಿರುವ ಅನುದಾನಗಳು ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv