ಬೆಂಗಳೂರು: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಬಹಳ ಮುಖ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಟಾಂಗ್ ನೀಡಿದ್ದಾರೆ.
ಜ್ಯೋತಿಷ್ಯದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ ಅವರ ಮಾಯಾನೋ, ಮಾಟನೋ ಜ್ಯೋತಿಷ್ಯನೋ, ಧರ್ಮಾನೋ, ಶ್ರಮಾನೋ, ಫಲ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ. 3 ವರ್ಷದಿಂದ ಪಟ್ಟ ಶ್ರಮವಿದು. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ – ಶರಣ್ ಪಂಪ್‍ವೆಲ್ ವಿರುದ್ಧ ಕೇಸ್
Advertisement
Advertisement
ಶ್ರಮ ಪಟ್ಟು 3 ವರ್ಷ ಸರಿಯಾಗಿ ನಿದ್ರೆ ಮಾಡಲಿಲ್ಲ ಊಟ ಮಾಡಲಿಲ್ಲ. ನಮ್ಮ ಕಾರ್ಯಕರ್ತರನ್ನ ಸರಿಯಾಗಿ ಮಲಗೋಕೆ ಬಿಡಲಿಲ್ಲ ಜನರು ವಿಶ್ವಾಸ ಇಟ್ಟು ನಂಬಿಕೆ ಇಟ್ಟು ವೋಟ್ ಹಾಕಿದ್ದಾರೆ ಅಧಿಕಾರ ಕೊಟ್ಟಿದ್ದಾರೆ ಅವರ ಋಣ ತೀರಿಸಬೇಕು. ಪಾಪಾ ಮಾತನಾಡಲಿ ಬಿಡಿ. ಅವರದ್ದೇ ಆದ ಅನುಭವ ಇದೆಯಲ್ಲ ಮಾತಾನಾಡುತ್ತಾ ಇರಬೇಕು ಎಂದರು.
Advertisement
ಕುಮಾರಸ್ವಾಮಿ ಅವರು ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಪೊಲೀಸ್ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್ ಬಾಂಬ್
Advertisement
ಆರ್ ಆರ್ ನಗರ ವಿಚಾರದಲ್ಲಿ ನಾನು ಯಾವುದೇ ಶಿಫಾರಸ್ಸು ಮಾಡಿಲ್ಲ. ಡಿ.ಕೆ.ಸುರೇಶ್ ಮಾತು ಕೇಳಿ ವರ್ಗಾವಣೆ ಮಾಡಲು ನನಗೆ ತಲೆ ಕೆಟ್ಟಿದೆಯಾ ಎಂದು ಪ್ರಶ್ನಿಸಿದರು.
ಯುರೋಪ್ ಪ್ರವಾಸದ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಬೆಂಗಳೂರಿಗೆ ಮಧ್ಯರಾತ್ರಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳು ಸಿಂಗಾಪುರಕ್ಕೆ ಹೋಗಿ ಸರ್ಕಾರ ಕೆಡಲು ಪ್ಲ್ಯಾನ್ ಮಾಡಲಾಗುತ್ತದೆ ಎಂದು ಡಿಕೆಶಿ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಬಹುಶಃ ಅವರ ಈ ಸರ್ಕಾರದ ಅವಧಿ ಬಹಳ ದಿನ ಇರುವುದಿಲ್ಲ ಎಂದು ಅವರು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜೋತಿಷ್ಯದವರನ್ನು ಬಹಳ ನಂಬುತ್ತಾರೆ. ಹಲವಾರು ರೀತಿ ಕುತಂತ್ರಗಳನ್ನ ಜೋತಿಷ್ಯದಲ್ಲಿ ಮಾಡುತ್ತಾರೆ. ಅದರ ಕೃತಕವಾದ ಶಕ್ತಿಯನ್ನು ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರುವುದಿಲ್ಲ ಎಂದು ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದರು.
Web Stories