ಬೆಂಗಳೂರು: ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna) ಕಳಂಕ ತಂದಿದ್ದಾರೆ. ಈ ಕಳಂಕ ತೊಳೆದುಕೊಳ್ಳುವವರೆಗೂ ದೇವೇಗೌಡರ (HD Devegowda) ಕುಟುಂಬದವರು ರಾಜೀನಾಮೆ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಠಕ್ಕರ್ ಕೊಟ್ಟಿದ್ದಾರೆ.
ಜೆಡಿಎಸ್ ನಾಯಕರು (JDS Leaders) ಪ್ರಜ್ವಲ್ ಯಾಕೆ ಹೀಗೆ ಮಾಡಿದ ಎಂದು ಹೇಳುತ್ತಿಲ್ಲ. ನಮ್ಮ ಮನೆ ಮಗ ತಪ್ಪು ಮಾಡಿದ್ದಾನೆ. ನಮ್ಮ ಕುಟುಂಬದ ಮೇಲೆ ಈ ಕಳಂಕ ಇದೆ. ಮನೆ ಮಗನಿಗೆ ಏನೂ ಆಗಬಾರದು, ಕುಟುಂಬದ ಪ್ರಖ್ಯಾತಿಯ ಬಗ್ಗೆ ಮಾತ್ರ ಅವರಿಗೆ ಕಾಳಜಿ. ಪ್ರಜ್ವಲ್‌ಗೆ ಮಾನಸಿಕ ರೋಗ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಅವರ ಮನೆಯವರು ಹೇಳಿದ್ದಾರಾ ಎಂದು ಪ್ರಶ್ನಿಸಿದರು.
Advertisement
Advertisement
ಈ ಕುಟುಂಬದಲ್ಲೇ ಮೇಲ್ಮನೆ, ಕೆಳಮನೆ, ರಾಜ್ಯಸಭೆ ಸದಸ್ಯರಿದ್ದಾರೆ. ಈ ಕಳಂಕ ಅಳಿಸುವವರೆಗೂ ರಾಜೀನಾಮೆ ಕೊಡುತ್ತೇವೆ ಎಂದು ಯಾಕೆ ಅವರು ಹೇಳುತ್ತಿಲ್ಲ? ಪ್ರಜ್ವಲ್ ಜರ್ಮನಿಗೆ (Germany) ಹೋಗಿದ್ದಾರೆ. ವಿಚಾರಣೆಗೆ ಕರೆದಾಗ ಬರುತ್ತಾರೆ ಎಂದಿದ್ದರು. ಈಗ ಪ್ರಜ್ವಲ್ ಎಲ್ಲಿದ್ದಾನೆ ಅಂತ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ – ನೆಲಮಂಗಲ ಬಳಿ ತಪ್ಪಿತು ದೊಡ್ಡ ದುರಂತ!
Advertisement
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪ್ರಜ್ವಲ್ ಕರೆತರಲು ಎಸ್ಐಟಿಗೆ (SIT) ಸಹಾಯ ಮಾಡಲಿ. ಪ್ರಜ್ವಲ್ ದೇಶದ ಒಳಗೆ ಇದ್ದರೆ ನಾವು ಹೇಗಾದರೂ ಹಿಡಿಯಬಹುದು. ವಿದೇಶದಲ್ಲಿ ಇದ್ದಾಗ ನಮಗೆ ಕೇಂದ್ರದ ಸಹಕಾರ ಬೇಕಾಗುತ್ತದೆ. ನಾವು ಪ್ರಜ್ವಲ್ ಕರೆತರಲು ಕೆಲವು ಕಾನೂನು ಚೌಕಟ್ಟು ಇದೆ. ಕೆಲ ಕಾನೂನು ಅಡೆತಡೆ ಇದೆ. ಹೀಗಾಗಿ ಕೇಂದ್ರ ಸರ್ಕಾರದ ನೆರವು ಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
Advertisement
ಬಿಜೆಪಿಯವರಿಗೆ ನೈತಿಕತೆ ಇದ್ದರೆ ಕೇಂದ್ರಕ್ಕೆ ಪತ್ರ ಬರೆದು ಎಸ್ಐಟಿ ಗೆ ಸಹಕಾರ ಕೊಡಿ ಅನ್ನಲಿ. ಸಂತ್ರಸ್ತೆಯರಿಗೆ ಬಿಜೆಪಿ, ಜೆಡಿಎಸ್ ನಾಯಕರು ಸಾಂತ್ವನ ಹೇಳಿದ್ದಾರಾ? ತಮ್ಮ ಮನೆ ಮಗನನ್ನು ಕಾಪಾಡುವುದ ಹೇಗೆ ಎಂಬುರ ಬಗ್ಗೆ ಮಾತ್ರ ಜೆಡಿಎಸ್ ಗಮನವಿದೆ. ಬಿಜೆಪಿ, ಜೆಡಿಎಸ್ ಸಂತ್ರಸ್ತೆಯರನ್ನು ಮರೆತಿದೆ ಎಂದು ವಾಗ್ದಾಳಿ ನಡೆಸಿದರು.