ಹಾಸನ: ಜಿಲ್ಲೆಯಲ್ಲಿ ಮುಂದಿನ ವಾರ ಪ್ರವಾಸ ಮಾಡುತ್ತೇನೆ. ಹಾಸನದ ಪ್ರತಿ ಕ್ಷೇತ್ರದಲ್ಲೂ ಒಂದೊಂದು ದಿನ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ತಿಳಿಸಿದರು.
ಇಂದು ಕಡೆ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರು ದೇವೇಶ್ವರನ ಪೂಜೆಗೆ ಆಗಮಿಸಿದ್ದ ವೇಳೆ ಹಾಸನದಲ್ಲಿ ಮಾತನಾಡಿದ ಅವರು, ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ. ಹಾಸನ ಜಿಲ್ಲೆ ಪ್ರವಾಸದ ಬಳಿಕ ರಾಜ್ಯ ಪ್ರವಾಸವನ್ನು ಮಾಡುತ್ತೇನೆ. ರಾಜ್ಯವನ್ನ ಮರೆಯೊದಿಲ್ಲ, ಪ್ರವಾಸ ಮುಗಿಸಿ ಪಾರ್ಲಿಮೆಂಟ್‍ಗೂ ಹೋಗುತ್ತೇನೆ ಎಂದರು. ಇದನ್ನೂ ಓದಿ: ನಾಪತ್ತೆಯಾಗಿದ್ದ ದೇಗುಲ ಮಠದ ಮೂವರು ವಿದ್ಯಾರ್ಥಿಗಳು ವಾಪಸ್
ಕೆಂಪೇಗೌಡರ ಪ್ರತಿಮೆ (Kempegowda Statue) ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಆಮಂತ್ರಣ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಚಾರದಲ್ಲಿ ಏನೂ ಮಾತನಾಡಲ್ಲ, ಯಾರ‍್ಯಾರು ಏನೇನು ಮಾಡಿದರು ಎಂದು ವಿಶ್ಲೇಷಣೆ ಮಾಡಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ಸುಗತ ಶ್ರೀನಿವಾಸ್ ಒಂದು ಟ್ವೀಟ್ ಮಾಡಿದ್ದಾರೆ, ಅದು ದೇಶದಾದ್ಯಂತ ಚರ್ಚೆ ಆಗಿದೆ. ಅದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳೋದಿಲ್ಲ ಎಂದರು. ಇದನ್ನೂ ಓದಿ: ಟರ್ಕಿ ಸ್ಫೋಟ – ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಶಂಕಿತ ಅರೆಸ್ಟ್