– ಕರ್ನಾಟಕದ ಸಂಪತ್ತನ್ನು ಬೇರೆ ರಾಜ್ಯಗಳ ಚುನಾವಣೆಗೆ ಹಂಚುತ್ತಿದ್ದಾರೆ
– ಬೆಂಗಳೂರಿನಲ್ಲಿ ಟ್ಯಾಂಕರ್ ದಂಧೆ ನಡೆಯುತ್ತಿದೆ ಎಂದು ಆರೋಪ
ಹಾಸನ: ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ. ಕರ್ನಾಟಕದ ಸಂಪತ್ತನ್ನು ಬೇರೆ ರಾಜ್ಯಗಳ ಚುನಾವಣೆಗೆ (Elections) ಹಂಚುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಅನ್ನೋ ಕಾರಣಕ್ಕೆ ನಾವು ಒಂದಾಗಿದ್ದೇವೆ. ಈ ದೇಶ ಉಳಿಸುವ ಒಬ್ಬರೇ ಒಬ್ಬ ವ್ಯಕ್ತಿ ಅದು ನರೇಂದ್ರ ಮೋದಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವರಹಳ್ಳಿಯಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವುದು ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಸರ್ಕಾರ. ಚುನಾವಣೆ ಮುಗಿದ ಬಳಿಕ ಇದನ್ನು ತೆಗೆಯಲೆಂದೇ ನಾವು ಒಂದಾಗಿದ್ದೇವೆ. ಯಡಿಯೂರಪ್ಪ ಅವರು ವಯಸ್ಸಿನ ಕಾರಣದಿಂದ ಮುಖ್ಯಮಂತ್ರಿ ಸ್ಥಾನದಿಂದ ಇಳಿದರು. ಯಡಿಯೂರಪ್ಪ (BS Yediyurappa) ಅವರು ರಾಜ್ಯದ ಉದ್ದಲಕ್ಕೂ ಹೋರಾಟ ಮಾಡಿದ್ದಾರೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹೋರಾಟದ ಕಿಚ್ಚು ಅವರ ಹೃದಯದಲ್ಲಿ ಬೇರೂರಿದೆ. 28ಕ್ಕೆ 28 ಸ್ಥಾನ ಗೆಲ್ಲಿಸಿಕೊಡ್ತೀವಿ ಅಂತ ಪ್ರಧಾನಿಯವರಿಗೆ ಹೇಳಿದ್ದೇನೆ. ಎತ್ತಿನಹೊಳೆ ಯೋಜನೆ ನೀರು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬರೋದಿಲ್ಲ. 8 ಸಾವಿರದಿಂದ ಯೋಜನೆ ಆರಂಭ ಆಯ್ತು. ಏನೇನು ಅವ್ಯವಹಾರ ಮಾಡಿದ್ದಾರೆ ಮಹಾನಾಯಕರು ಎಂದು ದೂರಿದ್ದಾರೆ. ಇದನ್ನೂ ಓದಿ: ಸಂಪತ್ತಿನ ಮರು ಹಂಚಿಕೆ: ಆರ್‌ಆರ್, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್ ಪ್ರಸಾದ್
9 ಜಿಲ್ಲೆಗಳ 24 ತಾಲ್ಲೂಕಿನಲ್ಲಿ ಕುಡಿಯುವ ನೀರಿಲ್ಲ. ಬೆಂಗಳೂರಿನಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಮಾರುವ ದಂಧೆ ಮಾಡುತ್ತಿದ್ದಾರೆ. ದೊಡ್ಡದಾಗಿ ಮಾತನಾಡುವವರು ಇದನ್ನು ತಡೆಯಲು ಆಗಲಿಲ್ಲ. ನನ್ನ 62 ವರ್ಷದ ರಾಜಕೀಯ ಅನುಭವದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಲಿಲ್ಲ. ನಮ್ಮ ರಾಜ್ಯದ ಸಂಪತ್ತನ್ನು ಬೇರೆ ರಾಜ್ಯಗಳ ಚುನಾವಣೆಗಳಿಗೆ ಹಂಚುತ್ತಿದ್ದಾರೆ. ಇಂತಹ ಸರ್ಕಾರ ಇರಬಾರದು, ಚುನಾವಣೆ ಮುಗಿದ ಮೇಲೆ ಈ ಸರ್ಕಾರ ತೆಗಿಯಬೇಕು ಎಂಬ ಉದ್ದೇಶದಿಂದ ಒಂದಾಗಿದ್ದೇವೆ ಎಂದಿದ್ದಾರೆ.
ಮೋದಿಯವರು ವಿಶ್ವ ನಾಯಕರಾಗಿ ಬೆಳೆದಿದ್ದಾರೆ, ಮುಂದೆ ಅವರೇ ಪ್ರಧಾನಿಯಾಗ್ತಾರೆ. ಆದ್ರೆ ಇಂಡಿಯಾ ಒಕ್ಕೂಟದಲ್ಲಿ ಯಾರು ಪ್ರಧಾನಿಯಾಗ್ತಾರೆ ಅಂತ ಸಿದ್ದರಾಮಯ್ಯ ಹೇಳಲಿ, ನಾನು ತಲೆ ಬಾಗುತ್ತೇನೆ. ಕಾಂಗ್ರೆಸ್‌ಗೆ ವೋಟು ಕೊಡಬಾರದು ಅಂತ ಮಮತಾ ಬ್ಯಾನರ್ಜಿ ಹೇಳ್ತಾರೆ. 28 ಸ್ಥಾನ ಗೆಲ್ಲಬೇಕೆಂಬ ಹುಚ್ಚು ನಮಗೆ, ಆ ಕಾರಣಕ್ಕೆ ನಾನು-ಯಡಿಯೂರಪ್ಪ ಒಂದಾಗಿದ್ದೇವೆ. ಈ ದೇಶವನ್ನು ಉಳಿಸುವ ಒಬ್ಬರೇ ಒಬ್ಬ ವ್ಯಕ್ತಿ ಅದು ನರೇಂದ್ರ ಮೋದಿ ಎಂದು ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ