– ಮೋದಿ ಟೀಕಿಸುವ ಭರದಲ್ಲಿ ಸಿಎಂ ಪುತ್ರ ವಿವಾದಾತ್ಮಕ ಹೇಳಿಕೆ
ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಪಕ್ಷಗಳು ಆಡಳಿತ ನಡೆದಿವೆ. ಯಾವಾಗಲೂ ಹಿಂದೂಗಳಿಗೆ ಅನ್ಯಾಯ ಆಗಿಲ್ಲ. ಈ ಸಲ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಹಿಂದೂ ಮಹಿಳೆಯರ (Hindu Womens) ಮಂಗಳಸೂತ್ರ ಮಾತ್ರವಲ್ಲ, ಎಲ್ಲಾ ಧರ್ಮದ ತಾಯಂದಿರೂ ತಮ್ಮ ಮಕ್ಕಳು ಹಾಗೂ ಗಂಡಂದಿರನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
Advertisement
Advertisement
ಏಕೆಂದರೆ ಈ ದೇಶದಲ್ಲಿ ಬಿಜೆಪಿ ಕೋಮುಗಲಭೆ, ದೊಂಬಿ ಗಲಾಟೆ ಸೃಷ್ಟಿ ಮಾಡಿ ಒಬ್ಬರನ್ನೊಬ್ಬರು ಬಡಿದಾಡಿಕೊಂಡು ಸಾಯುವಂತೆ ಮಾಡ್ತಾರೆ. ಇಡೀ ಸಮಾಜ ಅಧಃಪತನಕ್ಕೆ ಹೋಗುವಂತೆ ಮಾಡ್ತಾರೆ. ಮಕ್ಕಳಿಗೆ ಶಿಕ್ಷಣ ಕೊಡದೇ ಕೋಮು ಗಲಭೆಗಳಲ್ಲಿ ತೊಡಗಿಸಿ ನಿರುದ್ಯೋಗಿಗಳನ್ನಾಗಿ ಮಾಡ್ತಾರೆ ಎಂದು ಕಿಡಿ ಕಾರಿದ್ದರೆ. ಇದನ್ನೂ ಓದಿ:ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಕಾಂಗ್ರೆಸ್ ಹೇಳಿತ್ತು: ಮೋದಿ ಕಿಡಿ
Advertisement
ಪ್ರಧಾನಿ ಮೋದಿ ಮತ ಕೇಳುವ ನೆಪದಲ್ಲಿ ಅತ್ಯಂತ ತುಚ್ಛವಾದ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದ ಯಾವುದೇ ಒಬ್ಬ ಪ್ರಧಾನಿ ಇಂತಹ ಕೆಳಮಟ್ಟಕ್ಕೆ ಇಳಿಯೋದಿಲ್ಲ. ಮೋದಿ ಅವರು ಮತೀಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಕಣ್ಣು ಮುಚ್ಚಿ ಕುಳಿತಿದ್ಯೋ ಗೊತ್ತಿಲ್ಲ ವಾಗ್ದಾಳಿ ನಡೆಸಿದ್ದಾರೆ.
Advertisement
ಪ್ರಧಾನಿ ಮೋದಿ ಹೇಳಿದ್ದೇನು?
ರಾಜಸ್ಥಾನದ ಬನ್ಸಾರ್‌ನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು. ಅವರು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಹೇಳಿದ್ದರು. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ನೀಡಬಹುದೇ? ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಸ್ವತಂತ್ರವಾಗಿಯೇ 350 ಸೀಟು ಗೆಲ್ಲುತ್ತೆ, ತಮಿಳುನಾಡಿನಲ್ಲಿ 5 ಸೀಟು ಖಚಿತ: ಆರ್ಥಿಕ ತಜ್ಞ ಭಲ್ಲಾ ಭವಿಷ್ಯ
ಅಲ್ಲದೇ ಜನರ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ. ನಮ್ಮ ತಾಯಂದಿರು ಮತ್ತು ಸಹೋದರಿಯರ ಒಡೆತನದ ಮಂಗಳಸೂತ್ರ ಮತ್ತು ಚಿನ್ನದ ಮೌಲ್ಯವು ಅಮೂಲ್ಯವಾಗಿದೆ. ಕಾಂಗ್ರೆಸ್ ಈ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಮರುಹಂಚಿಕೆ ಮಾಡುವ ಭರವಸೆಯನ್ನು ಹೇಗೆ ನೀಡುತ್ತದೆ? ಎಂದು ಪ್ರಶ್ನಿಸಿದ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಿಂದೂ ಹೆಣ್ಮಕ್ಕಳ ಮಂಗಳ ಸೂತ್ರವನ್ನೂ ಉಳಿಸೋದಿಲ್ಲ ಎಂದು ಹೇಳಿದ್ದರು.