ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು (BJP – JDS Alliance) ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Deve Gowda) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗಿನ ಮಾತುಕತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಮೋದಿ, ಅಮಿತ್ ಶಾ ನನಗೆ ಗೌರವ ಕೊಡುತ್ತಾರೆ. ಅವರಿಗೆ ನನ್ನ ನಡವಳಿಕೆ ಗೊತ್ತಿದೆ. ನನಗೆ ಇಷ್ಟು ಸೀಟು ಕೊಡಿ ಅಂತ ಕೇಳಿಲ್ಲ. ಪ್ರತಿ ಕ್ಷೇತ್ರದ ಬಗ್ಗೆ ವಿವರಿಸಿದ್ದೇನೆ. ಸೀಟು ಬಗ್ಗೆ ಕುಮಾರಸ್ವಾಮಿ ಕೂತು ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
Advertisement
Advertisement
ನಾವ್ಯಾರು ದೇವರನ್ನು ಕಣ್ಣಿಂದ ನೋಡಿಲ್ಲ. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಉಳಿಯುತ್ತದೆ, ಬೆಳೆಯುತ್ತದೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಮತ್ತೆ ಪಕ್ಷ ಬೆಳೆಯುತ್ತದೆ. ನೀವು ಕಾರ್ಯಕರ್ತರು ನಮ್ಮ ಪಕ್ಷದ ಶಕ್ತಿ. ನೀವು ಪಕ್ಷ ಉಳಿಸಬೇಕು ಎಂದು ಅವರು ಭಾವುಕರಾಗಿ ಮಾತನಾಡಿದರು. ಇದನ್ನೂ ಓದಿ: INDIA ಸಂಘಟನೆಯಿಂದ ಬಿಜೆಪಿ ಹೆದರಿದೆ.. ಎರಡು ಮಾತಿಲ್ಲ: ಸ್ವಪಕ್ಷ ವಿರುದ್ಧವೇ ಹೆಚ್.ವಿಶ್ವನಾಥ್ ಹೇಳಿಕೆ
Advertisement
ನಾನು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೆ. ನಾನು ಮತ್ತೆ ಪ್ರಧಾನಿ ಆಗೋಕೆ ಅಲ್ಲ. ಪಕ್ಷ ಉಳಿಸೋಕೆ ಭೇಟಿ ಆಗಿದ್ದೆ. ಆದರೆ ನಾನು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದೆ ಎಂದು ಹೇಳುತ್ತಿದ್ದಾರೆ. ಈ ರಾಜ್ಯದಲ್ಲಿ ಯಾರಿಗೆ ನೈತಿಕತೆ ಇದೆ? ಯಾರಿಗೆ ಇಲ್ಲ ಅಂತ ವಿಶ್ಲೇಷಣೆ ಮಾಡಬಲ್ಲೆ. ಆದರೆ ನಾನು ವ್ಯಕ್ತಿಗತ ಟೀಕೆ ಮಾಡಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ದೇವೇಗೌಡ ಕಿಡಿಕಾರಿದರು.
Advertisement
ಕೆಲವರು ಕಾಂಗ್ರೆಸ್‌ಗೆ ಹೋಗುತ್ತೇನೆ ಎನ್ನುತ್ತಾರೆ. ಆದರೆ ನಾನು ದುಡುಕಬೇಡಿ ಎಂದು ಹೇಳಿದ್ದೇನೆ. ಬಿಜೆಪಿ ಅವರು ಎಷ್ಟು ಕ್ಷೇತ್ರ ಕೊಡುತ್ತಾರೆ ಗೊತ್ತಿಲ್ಲ. ಮೋದಿ ಅವರ ಜೊತೆ ಕುಮಾರಸ್ವಾಮಿ ಮಾತಾಡಿ ಸೀಟು ಫೈನಲ್ ಮಾಡುತ್ತಾರೆ. ಸೀಟು ಅಂತಿಮವಾದ ಬಳಿಕ ಎಲ್ಲಾ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡುತ್ತೇನೆ. ವ್ಹೀಲ್‌ಚೇರ್‌ನಲ್ಲೇ ಹೋಗಿ ಪ್ರಚಾರ ಮಾಡುತ್ತೇನೆ. ಎಲ್ಲರೂ ಬೆಂಬಲ ಕೊಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ
Web Stories