ಹಾಸನ: ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿಯನ್ನಾಗಿ ಮಾಡಿದೆ. ಆದರೆ ಎಚ್‍ಡಿಡಿ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗರಾಗಿದ್ದು, ಐದು ಬಾರಿ ಸ್ಪರ್ಧೆ ಮಾಡಲ್ಲ ಎಂದು ಹೇಳಿ ಮಾಡಿದ್ದಾರೆ. ಆದ್ದರಿಂದ ಈ ಬಾರಿಯೂ ಅವರು ಮಾಡುತ್ತಾರ ಕಾದು ನೋಡಬೇಕು. ಎಚ್‍ಡಿಡಿ ಬಿಟ್ಟು ಬೇರೆ ಅವರು ಸ್ಪರ್ಧೆ ಮಾಡಿದರೆ ನಮ್ಮ ವಿರೋಧ ಇರುತ್ತದೆ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.
Advertisement
ದೇಶದಲ್ಲಿ ಇಂದಿರಾ ಗಾಂಧಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನ ವಿರೋಧ ಮಾಡುತ್ತ ಎಚ್‍ಡಿಡಿ ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ ಅವರೇ ಇಂದು ತಮ್ಮ ಕುಟುಂಬದವರಿಗೆ ಟಿಕೆಟ್ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಲ್ಲದೇ ಮೈತ್ರಿ ಧರ್ಮದಲ್ಲಿ ಹಾಸನ ಹಾಗೂ ಮಂಡ್ಯ ಎರಡರಲ್ಲಿ ಒಂದು ನಮಗೆ ಕೊಡಬೇಕು. ಆದರೆ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಆಗದೆ ಸಚಿವ ಸಾರಾ ಮಹೇಶ್ ಅಭ್ಯರ್ಥಿ ಘೋಷಣೆ ತಪ್ಪು. ದೇವೇಗೌಡರು ಮಕ್ಕಳು ಮತ್ತು ಸೊಸೆ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಆದರೆ ಪಕ್ಷದಲ್ಲಿ ಇರುವ 2ನೇ ಹಂತದ ನಾಯಕರ ಗತಿ ಏನು ಎಂದು ಕಿಡಿಕಾರಿದರು.
Advertisement
ಇದೇ ವೇಳೆ ಮಂಡ್ಯ ಕ್ಷೇತ್ರವನ್ನು ಅಂಬರೀಶ್ ಕುಟುಂಬಕ್ಕೆ ಬಿಟ್ಟು ಕೊಡಲು ಒತ್ತಾಯ ಮಾಡುತ್ತೇವೆ. ಸುಮಲತಾ ಅವರೇ ಅಭ್ಯರ್ಥಿ ಮಾಡಬೇಕು ಎಂಬುವುದು ನಮ್ಮ ಒತ್ತಾಯ. ನಾನು ಹಾಸನ ಬಿಟ್ಟು ಎಲ್ಲಿಯೂ ಹೋಗಲ್ಲ. ದೇವೇಗೌಡರ ಸ್ಪರ್ಧೆ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv