ಬೆಂಗಳೂರು: ಸಿಎಂ ವಿರುದ್ಧದ ಮುಡಾ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಕಷ್ಟು ಕಾನೂನು ತಜ್ಞರು (Legal Experts) ಹೇಳಿದ್ದಾರೆಂದು ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ಗೆ ನಮ್ಮ ಸಿಎಂ, ಕೆಪಿಸಿಸಿ ಅಧ್ಯಕರು ಪ್ರತ್ಯೇಕವಾಗಿ ಭೇಟಿಯಾಗಿ ವಿವರಿಸಿದ್ದಾರೆ. ರಾಜಭವನ ದುರ್ಬಳಕೆ ಮಾಡಿಕೊಳ್ಳುವ ಜೆಡಿಎಸ್-ಬಿಜೆಪಿ (BJP-JDS) ಹುನ್ನಾರ ಹೈಕಮಾಂಡ್‌ಗೆ ಅರ್ಥವಾಗಿದೆ. ಯಾವುದೇ ಹೋರಾಟ ಮಾಡಲು ಹಿಂಜರಿಯಬಾರದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: `ಕೈʼ ನಾಯಕರು ಕುಮಾರಣ್ಣನನ್ನ ಹೇಗೆ ಕಟ್ಟಿ ಹಾಕ್ಬೇಕು ಅಂತ ದೆಹಲಿಯಲ್ಲಿ ಚರ್ಚಿಸಿದ್ದಾರೆ: ನಿಖಿಲ್ ಕಿಡಿ
Advertisement
Advertisement
ನಮ್ಮ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಇಡೀ ಶಾಸಕರು, ಮಂತ್ರಿಮಂಡಲ, ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ. ಹೀಗಿರುವಾಗ ನಾಯಕತ್ವ ಬದಲಾವಣೆ ಪ್ರಶ್ನೆ ಎಲ್ಲಿಂದ ಬಂತು? ಜೆಡಿಎಸ್-ಬಿಜೆಪಿ ಷಡ್ಯಂತ್ರ ಭಗ್ನಗೊಳಿಸಲು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ಅಬ್ಬರಿಸಿದ್ದಾರೆ.
Advertisement
ಇನ್ನೂ ಸಿಎಂ ಆರೋಗ್ಯಕರವಾಗಿದ್ದಾರೆ, ನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಆಯಾಸವಾಗುವುದಿಲ್ಲ. ಖರ್ಗೆ ನಾಯಕತ್ವದಲ್ಲೇ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ಸುರ್ಜೇವಾಲ ಸಮ್ಮುಖದಲ್ಲೇ ನಾಯಕತ್ವದ ಬದಲಾವಣೆ ಇಲ್ಲ ಎಂದಾಗ ಇದೆಕ್ಕೆಲ್ಲಾ ಅಂತ್ಯ ಇಲ್ವ? ಸಿದ್ದರಾಮಯ್ಯ ಮತ್ತು ನನ್ನ ಐಡಿಯಾಲಜಿ ಒಂದೇ ಅಲ್ವಾ? ನಾನು ಇವತ್ತು, ನಿನ್ನೆ ಅವರ ಪರವಾಗಿ ನಿಂತಿಲ್ಲ, ಬಹಳ ವರ್ಷಗಳಿಂದ ಅವರ ಪರವಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಕೇಸ್; ಇದೊಂದು ಹೇಯಕೃತ್ಯ, ಸಂತ್ರಸ್ತೆಗೆ ಜಿಲ್ಲಾಡಳಿತದಿಂದ ನೆರವು – ಲಕ್ಷ್ಮಿ ಹೆಬ್ಬಾಳ್ಕರ್
Advertisement
ಸಾಕಷ್ಟು ಕಾನೂನು ತಜ್ಞರು ಹೇಳಿದ್ದಾರೆ ಸಿಎಂ ವಿರುದ್ಧದ ಮೂಡಾ ಕೇಸ್‌ನಲ್ಲಿ (MUDA Case) ಯಾವುದೇ ಹುರುಳಿಲ್ಲ ಅಂತ. ಸಾಕಷ್ಟು ಕೇಸ್ ರಾಜ್ಯಪಾಲರ ಮುಂದೆ ಇದೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ನಿರಾಣಿ ಕೇಸ್‌ಗಳು ಇವೆ. ಅವುಗಳನ್ನು ಬಿಟ್ಟು ಸಿದ್ದರಾಮಯ್ಯರ ಕೇಸ್ ಮಾತ್ರ ಯಾಕೆ? ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿ. ಸಂವಿಧಾನದ ಮೇಲೆ ಕೆಲಸ ಮಾಡುವವರು. ಬೆಳಗ್ಗೆ ದೂರು ಕೊಟ್ರೆ ಸಂಜೆ ನೋಟಿಸ್ ಕೊಟ್ಟಿದ್ದಾರೆ. ಹಳೇ ಪ್ರಕರಣ ಬಿಟ್ಟು ಸಿದ್ದರಾಮಯ್ಯಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ಇದನ್ನ ನೋಡಿದ್ರೆ ಏನ್ ಅನಿಸುತ್ತೆ ಅಂತ ಗೊತ್ತಾಗುತ್ತೆ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
11 ವಿಧೇಯಕ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಲವು ಮಹತ್ವದ ಬಿಲ್‌ಗಳು ವಾಪಸ್ ಬಂದಿವೆ. ಇಷ್ಟು ಬಿಲ್ ವಾಪಸ್ ಬಂದ್ರೆ ಹೇಗೆ? ಯಾವ ರಾಜ್ಯಪಾಲರು ಕೂಡ ಇಷ್ಟು ಬಿಲ್ ವಾಪಸ್ ಕಳುಹಿಸಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: T20 World Cup | ಪಾಕ್ ತಂಡಕ್ಕೆ 22ರ ತರುಣಿ ಫಾತಿಮಾ ಸನಾ ನಾಯಕಿ!
ಇದೇ ಸಂದರ್ಭದಲ್ಲಿ ದಲಿತ ಸಿಎಂ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವ ಹೆಚ್.ಸಿ ಮಹಾದೇವಪ್ಪ, ಪ್ರತಿಯೊಂದು ಸಮುದಾಯಕ್ಕೆ ಅವಕಾಶ ಸಿಗಬೇಕು. ಆದ್ರೆ ಅದಕ್ಕೆ ಕಾಲ ಬರಬೇಕು. ಈಗ ಸಿಎಂ ಇದ್ದಾರೆ, ಇನ್ನೊಬ್ಬ ಸಿಎಂ ಅವಶ್ಯಕತೆ ಇಲ್ಲ ಎಂದರಲ್ಲದೇ ಆಪರೇಷನ್ ಕಮಲಕ್ಕಾಗಿ, ಕಾಂಗ್ರೆಸ್ ಶಾಸಕರಿಗೆ ಆಮಿಷ ನೀಡುತ್ತಿರುವುದು ಹೊಸ ವಿಚಾರ ಅಲ್ಲ. ಬಿಜೆಪಿಗೆ ಯಾವತ್ತು ಜನರು ಮ್ಯಾಂಡೇಟ್ ಕೊಟ್ಟಿಲ್ಲ. ಸರ್ಕಾರವನ್ನು ಅತಂತ್ರ ಮಾಡಲು ಹೊರಟಿದ್ದಾರೆ. ಹಿಂದೆ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಬಿಜೆಪಿ ಆಪರೇಷನ್ ಮಾಡಿ ಸರ್ಕಾರ ಮಾಡಿತ್ತು. ಬಿಜೆಪಿ ಸರ್ಕಾರ ಸಕ್ಸಸ್ ಆಗಿಲ್ಲ. ಹಗರಣದಲ್ಲಿ ಬಿಜೆಪಿ ಸರ್ಕಾರ ಸಿಲುಕಿತು. ಮತ್ತೆ ಹಳೇ ಚಾಳಿ ಬಿಜೆಪಿಗರು ಮುಂದುವರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದಸರಾ ಉದ್ಘಾಟನೆ ಬಗ್ಗೆ ಮಾತನಾಡಿ, ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಯಾರು ಮಾಡಬೇಕು ಅನ್ನೋದನ್ನ ಸಿಎಂ ನಿರ್ಧಾರ ಮಾಡ್ತಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಓವರ್ ಕಾನ್ಫಿಡೆನ್ಸ್‌ನಿಂದ ಪಾಕ್‌ಗೆ ತವರಿನಲ್ಲೇ ಹೀನಾಯ ಸೋಲು – ಬಾಂಗ್ಲಾಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು!