ಹಾವೇರಿ: ಸ್ಮಶಾನಕ್ಕೆ ಸರಿಯಾದ ದಾರಿಯಿಲ್ಲದೆ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಹೋಗಲು ಗ್ರಾಮಸ್ಥರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ಬಸಪ್ಪ ಪೂಜಾರ ಎಂಬ 75 ವರ್ಷದ ವಯೋವೃದ್ದ ಮೃತಪಟ್ಟಿದ್ದಾರೆ. ಗ್ರಾಮದ ಬಳಿ ಇರೋ ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದೆ, ರೈತರ ಭತ್ತದ ಗದ್ದೆಯಲ್ಲಿ ಮೃತದೇಹವನ್ನ ಹೊತ್ತುಕೊಂಡು ಕೆಸರಿನಲ್ಲಿ ನಡೆದು ಹೋಗುವ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು
Advertisement
Advertisement
ಗ್ರಾಮಸ್ಥರು ಹಾಗೂ ಸಂಬಂಧಿಕರು ಕೆಸರಿನ ಭತ್ತದ ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟುಕೊಂಡು ಅಂತ್ಯಕ್ರಿಯೆಗೆ ತೆರಳಿದ್ದಾರೆ. ಸ್ಮಶಾನದ ಸುತ್ತಮುತ್ತ ರೈತರ ಜಮೀನುಗಳು ಇವೆ. ಅದರೆ ಸ್ಮಶನಕ್ಕೆ ಹೋಗಲು ಸರಿಯಾದ ರಸ್ತೆಯನ್ನ ಮಾಡಿಲ್ಲ. ಸ್ಮಶಾನದ ಸುತ್ತಮುತ್ತಲಿನ ಎಲ್ಲ ಜಮೀನುಗಳಲ್ಲಿ ರೈತರಹ ಭತ್ತ ನಾಟಿ ಮಾಡಿದ್ದಾರೆ. ಕೂಡಲೇ ತಾಲೂಕು ಆಡಳಿತ ಹಾಗೂ ಜಿಲ್ಲಾಧಿಡಳಿತ ಸ್ಮಶಾನಕ್ಕೆ ಹೋಗುವ ರಸ್ತೆಯ ಸರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.