ಬಾಗಲಕೋಟೆ: ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ಬಾದಾಮಿ ತಾಲೂಕಿನ ಮಂಗಳೂರು ಗ್ರಾಮದ ಯುವಕರು ರಕ್ಷಿಸಿ ಜೀವ ಉಳಿಸಿದ್ದಾರೆ.
Advertisement
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಸೇತುವೆ ಬಳಿಯ ಮಲಪ್ರಭಾ ನದಿಗೆ ವೃದ್ಧೆ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದರು. ಈ ವೇಳೆ ಮಂಗಳೂರು ಗ್ರಾಮದ ರವಿ, ಪವನ್ ಸೇರಿದಂತೆ ಐದಾರು ಯುವಕರು ಸ್ನಾನ ಮಾಡಲು ನದಿಗೆ ತೆರಳಿದ್ದು, ವೃದ್ಧೆ ನದಿಗೆ ಹಾರಿದ್ದನ್ನು ಗಮನಿಸಿದ್ದಾರೆ. ತಕ್ಷಣ ವೃದ್ಧೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್
Advertisement
Advertisement
ಹೊರ ತೆಗೆದ ನಂತರ ಯುವಕರು ವೃದ್ಧೆಯನ್ನು ವಿಚಾರಿಸಿದಾಗ ತನ್ನ ಗೋಳನ್ನು ತೋಡಿಕೊಂಡಿದ್ದಾರೆ. ನದಿಗೆ ಬಿದ್ದ ರಭಸಕ್ಕೆ ವೃದ್ಧೆಯ ತಲೆಗೆ ಪೆಟ್ಟು ಬಿದ್ದಿದ್ದು, ಅದಕ್ಕೆ ಯುವಕರು ವೃದ್ಧೆಯನ್ನು ಶಿವಯೋಗ ಮಂದಿರಕ್ಕೆ ಬಿಟ್ಟು ಬಂದಿದ್ದಾರೆ. ಯುವಕರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆ
Advertisement
ವೃದ್ಧೆಯು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದವರಾಗಿದ್ದು, ಸೊಸೆಯಂದಿರ ಕಾಟ ತಾಳಲಾರದೇ ಮನೆ ಬಿಟ್ಟು ಬಂದಿದ್ದಾರೆ. ಜೀವನದಲ್ಲಿ ಬೇಸತ್ತ ಅವರು ಆತ್ಮಹತ್ಯೆಗೆ ಮುಂದಾಗಿದ್ದಾರೆ.