ಹಾವೇರಿ: ರಾಜ್ಯದಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಏರಿಕೆ (Milk Price Hike) ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಆದ್ರೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಪ್ರತಿ ಲೀಟರ್ ಹಾಲಿನ ದರ 3.50 ರೂ. ಇಳಿಕೆ ಮಾಡಿದೆ.
ಮಾರ್ಚ್ 28 ರಿಂದ ಆದೇಶವನ್ನ ಜಾರಿಗೆ ಮಾಡಿದೆ. ಏಪ್ರೀಲ್ 1 ರಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲು ಕೆಎಂಎಫ್ (KMF) ನಿರ್ಧಾರ ಮಾಡಿದೆ. ಆದರೆ ಹಾವೇರಿ ಹಾಲು ಒಕ್ಕೂಟ ಮಾತ್ರ ಲೀಟರ್ ಹಾಲಿಗೆ 3.50 ರೂ.ಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ, ಇದು ರೈತರ ಆಕ್ರೋಶ ಕಾರಣವಾಗಿದೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?
ಎಮ್ಮೆ ಹಾಲಿಗೆ ಲೀಟರ್‌ಗೆ 43 ರೂ. ನೀಡಲಾಗುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡಲಾಗ್ತಿತ್ತು. ಆದರೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಕಾರಣ ನೀಡಿ 3.50 ರೂಪಾಯಿ ಕಟ್ ಮಾಡಿದೆ. ಮಾರ್ಚ್ 27ರಂದೇ ಹಾವೆಮುಲ್ ಆದೇಶ ಮಾಡಿದೆ. ಇದರಿಂದ 43 ರೂ. ಇದ್ದ ಎಮ್ಮೆ ಹಾಲಿನ ದರ 39.50 ರೂ., 30.50 ರೂ. ಇದ್ದ ಹಸುವಿನ ಹಾಲಿನ ದರ 27 ರೂ.ಗಳಿಗೆ ಇಳಿಕೆಯಾಗಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ
ಹಾಲು ಉತ್ಪನ್ನಗಳ ದರ ಕುಸಿತವಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಿ ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಒಕ್ಕೂಟದ ಆರ್ಥಿಕ ನಷ್ಟ ಕಡಿಮೆ ಮಾಡಲು ದರ ಕಡಿಮೆ ಮಾಡಲಾಗಿದೆ ಎಂದು ಹಾಲು ಒಕ್ಕೂಟ ನಿರ್ದೇಶಕರು ಆದೇಶ ಮಾಡಿದ್ದಾರೆ. ಆದರೆ ಜಿಲ್ಲೆಯ ಹಾಲು ಉತ್ಪಾದಕ ರೈತರು ಗ್ರಾಹಕರಿಗೆ 4 ಏರಿಕೆ ಮಾಡಿದ್ದಾರೆ. ಮೊದಲು ಕೊಡುವ ದರದಲ್ಲಿ ಇಳಿಕೆ ಮಾಡಿದ್ದು ಯಾವ ನ್ಯಾಯ ನಿಮ್ಮದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ