ಹಾವೇರಿ: ರೈತರೊಬ್ಬರ ಜಮೀನಿನಲ್ಲಿ ದೇವರ ಮೂರ್ತಿಗಳು ಉದ್ಭವಾಗಿವೆ ಎಂಬ ವದಂತಿ ಹರಡಿದೆ. ದೇವರನ್ನು ನೋಡಲು ಜನರು ತಂಡೋಪತಂಡವಾಗಿ ಬರುತ್ತಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ದೇವರ ಉದ್ಭವ ಮೂರ್ತಿಗಳು ಮಣ್ಣಿನಲ್ಲಿ ಹುದುಗಿರುವ ರೂಪದಲ್ಲಿ ಕಂಡುಬಂದಿವೆ. ಗ್ರಾಮದ ಉಡಚಪ್ಪ ಕೊಡೆಪ್ಪನವರ ಜಮೀನಿನಲ್ಲಿ ಈ ಮೂರ್ತಿಗಳು ಉದ್ಭವವಾಗಿವೆ. ಕಳೆದೊಂದು ವರ್ಷದಿಂದ ರೈತ ಉಡಚಪ್ಪ ಮತ್ತು ಆತನ ಪತ್ನಿ ಮಂಜವ್ವಳ ಕನಸಿನಲ್ಲಿ ಉಡಚಮ್ಮದೇವಿ ಬರುತ್ತಿದ್ದಳಂತೆ. 21 ದಿನಗಳ ಕಾಲ 21 ಗ್ರಾಮದಲ್ಲಿ ಭಿಕ್ಷೆ ಬೇಡಿ ತನ್ನನ್ನು ಪೂಜಿಸಿದರೆ ಆ ಜಾಗದಲ್ಲಿ ಪ್ರತ್ಯಕ್ಷಳಾಗುತ್ತೇನೆ ಎಂದು ಕನಸಿನಲ್ಲಿ ಹೇಳಿದ್ದಳಂತೆ. ಈಗ ಎರಡು ದಿನಗಳಿಂದ ರೈತ ಉಡಚಪ್ಪನ ಜಮೀನಿನಲ್ಲಿ ಪಾರ್ವತಿ, ಪರಮೇಶ್ವರ, ಗಣೇಶ, ಉಡಚಮ್ಮ, ನಾಗವೇಣಿ, ಯಲ್ಲಮ್ಮಳ ದೇವರ ಮೂರ್ತಿಗಳು ಅಸ್ಪಷ್ಟವಾಗಿ ಗೋಚರಿಸಿವೆ. ಇದನ್ನೂ ಓದಿ: ಬಿಕಿನಿಯಲ್ಲಿ ಸಾರಾ ಅಲಿ ಖಾನ್ ಸಖತ್ ಹಾಟ್
ಜನ ಮರಳೋ ಜಾತ್ರೆ ಮರಳೋ ಎಂಬಂತೆ ಮೂರ್ತಿಗಳನ್ನು ನೋಡಿ ಪೂಜೆ ಮಾಡುವುದಕ್ಕೆ ಜನ ದಂಡು ದಂಡಾಗಿ ಬರುತ್ತಿದ್ದಾರೆ. ರೈತ ಉಡಚಪ್ಪ ಕೊಡೆಪ್ಪನವರ ಕುಟುಂಬ ಸದಸ್ಯರು ದೇವಿಯ ಆಜ್ಞೆಯಂತೆ ಐದು ದಿನಗಳಿಂದ ಊರೂರು ತಿರುಗಾಡಿ ಭಿಕ್ಷೆ ಬೇಡುತ್ತಿದ್ದಾರೆ. ಜಮೀನಿನಲ್ಲೇ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಮೂಲದ ಓರ್ವ ಸ್ವಾಮೀಜಿ ಮೂಲಕಪೂಜೆ ಮಾಡಿಸಿ ಅನುಷ್ಠಾನ ಕೈಗೊಂಡಿದ್ದಾರೆ. ಯಾರೊಂದಿಗೆ ಮಾತನಾಡದೆ ಸ್ವಾಮೀಜಿ ಮೌನ ವೃತ ಮಾಡುತ್ತಿದ್ದಾರೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ
ಇದು ಪವಾಡವೋ ಏನೋ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಜನರು ಜಮೀನಿಗೆ ಆಗಮಿಸಿ ದರ್ಶನ ಪಡೆದು ಹೋಗುತ್ತಿದ್ದಾರೆ. ಅದರೆ ಆ ಕುಟುಂಬ ಮಾತ್ರ ಪ್ರತಿದಿನ ಬೆಳಗ್ಗೆ ಒಂದು ಊರಿಗೆ ತೆರಳಿ ಭಿಕ್ಷಾಟನೆ ಮಾಡಿ, ದೇವರ ಪೂಜೆ ಮಾಡಿ 21 ನೇ ದಿನಕ್ಕೆ ದೇವರ ಜೊತೆಗೆ ಅನ್ನಪ್ರಸಾದವನ್ನ ಮಾಡುತ್ತಿದ್ದಾರೆ.