ಹಾವೇರಿ: ನಿರ್ಗತಿಕ ಹಾಗೂ ಅನಾಥ ಮಕ್ಕಳೊಂದಿಗೆ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ದೀಪಾವಳಿ ಆಚರಿಸಿ ಕತ್ತಲು ಮೂಡಿದ್ದ ಮಕ್ಕಳ ಮನಸ್ಸಿನಲ್ಲಿ ಬೆಳಕು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಹೌದು, ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿ ಬೆಳಕು ತರಲಿ ಎನ್ನುವುದೇ ಹಿರಿಯರ ಮಾತು. ಆದರೆ ನಿರ್ಗತಿಕ ಹಾಗೂ ಅನಾಥ ಮಕ್ಕಳು ಬೆಳಕಿನ ಹಬ್ಬದಿಂದ ವಂಚಿತರಾಗುತ್ತಲೇ ಇರುತ್ತಾರೆ. ಆದರೆ ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ವೆಂಕಟೇಶ್ ಇಂತಹ ಮಕ್ಕಳ ಜೊತೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.
Advertisement
Advertisement
ಇಂದು ತಮ್ಮ ನಿವಾಸದಲ್ಲಿ ನಿರ್ಗತಿಕ ಹಾಗೂ ಅನಾಥ ಮಕ್ಕಳೊಂದಿಗೆ ಅವರು ಸಡಗರದ ದೀಪಾವಳಿಯನ್ನು ಆಚರಿಸಿದ್ದಾರೆ. ಅಲ್ಲದೇ ಮನೆಗೆ ಬಂದಿದ್ದ 22 ಮಕ್ಕಳಿಗೂ ಹೊಸ ಬಟ್ಟೆಗಳನ್ನು ವಿತರಿಸಿ, ಮನೆಯಲ್ಲೇ ಅವರ ಜೊತೆ ಲಾಡು, ಪಾಯಸವನ್ನು ಒಟ್ಟಿಗೆ ಕುಳಿತು ಸೇವಿಸಿ ಹಬ್ಬ ಆಚರಿಸಿದರು.
Advertisement
ಡಿಸಿ ವೆಂಕಟೇಶ್‍ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀ ಮಲ್ಲಿಕಾರ್ಜುನ ಮಠದ ವಿನಯ, ಬಸವನಾಯಕ, ಗಿರೀಶ, ಕುಟೀರದ ಅಧೀಕ್ಷಕ ಪುಟ್ಟಪ್ಪ ಹಾಗೂ ಇತರರು ಸಾಥ್ ನೀಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv