ಮುಂಬೈ: ಸಮುದಾಯದ ಉಳಿವಿಗಾಗಿ ಕನಿಷ್ಠ 3 ಮಕ್ಕಳನ್ನಾದರೂ ಪಡೆಯಬೇಕು ಎಂದು ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಭಾನುವಾರ ನಾಗ್ಪುರದಲ್ಲಿ ನಡೆದ ‘ಕಥಲೆ ಕುಲ್ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಜನಸಂಖ್ಯೆಯ ಬೆಳವಣಿಗೆ ದರವು 2.1 ಕ್ಕಿಂತ ಕಡಿಮೆಯಾದರೆ ಸಮಾಜವು ನಾಶವಾಗುತ್ತದೆ. ಆದ್ದರಿಂದ ಅದು ಕನಿಷ್ಠ 3 ಆಗಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಕ್ಫ್ ಮಂಡಳಿಯನ್ನೇ ವಿಸರ್ಜಿಸಿದ ಆಂಧ್ರಪ್ರದೇಶ ಸರ್ಕಾರ
ಜನಸಂಖ್ಯಾ ಅಧ್ಯಯನಗಳ ಪ್ರಕಾರ, ಒಂದು ಸಮುದಾಯದ ಜನಸಂಖ್ಯೆಯು 2.1 ರ ಫಲವಂತಿಕೆ ದರಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಅಳಿವಿನಂಚಿಗೆ ಸೇರುತ್ತದೆ. ಆ ಸಮುದಾಯ ತಂತಾನೆ ಕಣ್ಮರೆಯಾಗುತ್ತದೆ. ಇದರಿಂದ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವ ಕಳೆದುಕೊಂಡಿವೆ. ಆದ್ದರಿಂದ, ನಮ್ಮ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಮಾತನಾಡಿದ್ದಾರೆ.
ಜನಸಂಖ್ಯೆಯು 2.1 ಜನನ ಪ್ರಮಾಣಕ್ಕಿಂತ ಕೆಳಗಿಳಿಯಬಾರದು. ಭಾರತದ ಜನಸಂಖ್ಯಾ ನೀತಿಯನ್ನು 1998 ಅಥವಾ 2002 ರಲ್ಲಿ ನಿರ್ಧರಿಸಲಾಯಿತು. ಸಮಾಜದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆ ಇರಬಾರದು ಎಂದು ಅದರಲ್ಲಿ ಹೇಳಲಾಗಿದೆ. ಸಮಾಜವು ಉಳಿಯಬೇಕು ಏಕೆಂದರೆ ಸಂಖ್ಯೆ ಮುಖ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಈಗಾಗಲೇ ನನ್ನ ಬೇಷರತ್ ಬೆಂಬಲ ನೀಡಿದ್ದೇನೆ: ‘ಮಹಾ’ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ಶಿಂಧೆ ಬೆಂಬಲ
ಮೋಹನ್ ಭಾಗವತ್ ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.