ರಾಯ್ಪುರ: ನನ್ನ ವಿಧಾನಸಭಾ ಕ್ಷೇತ್ರದ ರಸ್ತೆಗಳು ಸಂಸದೆ ಹೇಮಾ ಮಾಲಿನಿ ಅವರ ಕೆನ್ನೆಯಂತೆ ನುಣುಪಾಗಿವೆ ಎಂದು ಛತ್ತೀಸಗಢ ಕಾಂಗ್ರೆಸ್ ಸಚಿವ ಕವಾಸಿ ಲಖಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಧಮತರಿ ಜಿಲ್ಲೆಯ ಕುರೂದ್ ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾವು ಅಧಿಕಾರಕ್ಕೆ ಬಂದ ಕೂಡಲೇ ರಸ್ತೆಗಳನ್ನು ಹೇಮಾ ಮಾಲಿನಿಯವರ ಕೆನ್ನೆಯಂತೆ ನುಣುಪಾಗಿ ಹೊಳೆಯುವಂತೆ ಮಾಡಲಾಗಿದೆ ಎಂದಿದ್ದಾರೆ.
Advertisement
Advertisement
ನಕ್ಸಲ್ ಪೀಡಿತ ಪ್ರದೇಶವಾದರೂ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಹಿಂದಿನ ಸರ್ಕಾರದ ಭ್ರಷ್ಟಾಚಾರದ ಪರಿಣಾಮ ರಸ್ತೆಗಳೆಲ್ಲ ತಗ್ಗುಗಳಿಂದ ಕೂಡಿದ್ದವು. ರಸ್ತೆಗಳು ಹಾಳಾಗಲು ಹಿಂದಿನ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.
Advertisement
ಬಿಜೆಪಿ ಕಿಡಿ: ಪಕ್ಷ ಹಾಗೂ ಸಂಸದೆ ಬಗ್ಗೆ ಮಾತನಾಡಿರುವ ಸಚಿವ ಲಖಮಾ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಸಚಿವರ ಈ ರೀತಿಯ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಾಯಕರು ಮಹಿಳಾ ಸಂಸದರಿಗೆ ಗೌರವ ನೀಡಬೇಕು. ತಮ್ಮ ಹೇಳಿಕೆಗಳಿಂದ ಕಾಂಗ್ರೆಸ್ ಸಂಸ್ಕೃತಿಯನ್ನು ರಾಜ್ಯದ ಜನತೆಗೆ ತೋರಿಸುತ್ತಿದ್ದಾರೆ. ಸಚಿವರು ಕ್ಷಮೆ ಕೇಳಬೇಕೆಂದು ಬಿಜೆಪಿ ನಾಯಕಲ ರವಿಕಾಂತ್ ಚಂದ್ರಕಾರ್ ಆಗ್ರಹಿಸಿದ್ದಾರೆ.
Advertisement
ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಪಿ.ಸಿ.ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹದೆಗಟ್ಟಿರುವ ರಸ್ತೆಗಳನ್ನು ಹೇಮಾ ಮಾಲಿನಿಯವರ ಕೆನ್ನೆಯಂತೆ ಮಾಡುತ್ತೇವೆ ಎಂದಿದ್ದರು. ಪಿ.ಸಿ.ಶರ್ಮಾರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.