Connect with us

Cinema

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಇಂದು ಡಬಲ್ ಧಮಾಕಾ!

Published

on

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಇಂದು ಡಬಲ್ ಧಮಾಕಾ ನಡೆಯಲಿದೆ. ಶಿವರಾಜ್‍ಕುಮಾರ್ ಇಂದು ತಮ್ಮ 32ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಮತ್ತೊಂದೆಡೆ ‘ಓಂ’ ಚಿತ್ರ ಬಿಡುಗಡೆಗೊಂಡು 23 ವರ್ಷಗಳು ಆಗಿದೆ.

ಶಿವರಾಜ್‍ಕುಮಾರ್ ತನ್ನ ಪತ್ನಿ ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 32 ವರ್ಷ ಆಗಿದೆ. ಮೇ 19, 1986ರಲ್ಲಿ ಶಿವರಾಜ್‍ಕುಮಾರ್ ಪತ್ನಿ ಗೀತಾ ಅವರನ್ನು ಮದುವೆಯಾಗಿದ್ದರು. 32 ವರ್ಷದಲ್ಲಿ ಗೀತಾ ನಟ ಶಿವರಾಜ್‍ಕುಮಾರ್ ಅವರಿಗೆ ಅತ್ಯುತ್ತಮ ಪತ್ನಿ ಎನಿಸಿಕೊಂಡಿದ್ದಾರೆ. ಮನೆಗೆಲಸ ಅಲ್ಲದೇ ಶಿವರಾಜ್ ಕುಮಾರ್ ಅವರ ಸಿನಿಮಾಗೆ ಸಂಬಂಧಪಟ್ಟಂತ ಕೆಲಸಗಳಲೂ ಗೀತಾ ಶಿವಣ್ಣನಿಗೆ ಸಾಥ್ ನೀಡಿದ್ದಾರೆ.

ಮೇ 19, 1986ರಲ್ಲಿ ಶಿವರಾಜ್‍ಕುಮಾರ್ ಗೀತಾ ಅವರ ಜೊತೆ ಆರೇಂಜ್ ಮ್ಯಾರೇಜ್ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಿವೇದಿತಾ ಹಾಗೂ ನಿರೂಪಮಾ ಇಬ್ಬರೂ ಹೆಣ್ಣು ಮಕ್ಕಳಿದ್ದು, ನಿರೂಪಮಾ ಆಗಸ್ಟ್ 31, 2015ರಂದು ದಿಲೀಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜ್‍ಕುಮಾರ್ ಮೊಮ್ಮಕ್ಕಳಲ್ಲಿ ನಿರೂಪಮಾ ಅವರ ಮೊದಲ ಮದುವೆಯಾಗಿದ್ದು, ಶಿವರಾಜ್‍ಕುಮಾರ್ ಅದ್ಧೂರಿಯಾಗಿ ತಮ್ಮ ಮಗಳ ಮದುವೆಯನ್ನು ನಡೆಸಿಕೊಟ್ಟಿದ್ದರು.

ಇನ್ನೊಂದೆಡೆ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ್ದ ಶಿವರಾಜ್‍ಕುಮಾರ್ ನಟನೆಯ ‘ಓಂ’ ಚಿತ್ರ ತೆರೆಗೆ ಬಂದು ಇಂದು 23 ವರ್ಷಗಳು ಆಗಿದೆ. ಮೇ 19, 1995ರಲ್ಲಿ ಓಂ ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಓಂ ಚಿತ್ರ 550 ಬಾರಿ ರೀ ರಿಲೀಸ್ ಆಗಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ. ಓಂ ಚಿತ್ರಕ್ಕಾಗಿ ಶಿವರಾಜ್‍ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

ಓಂ ಚಿತ್ರ ಮಾಸ್ ಸಿನಿಮಾ ಹಾಗೂ ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿದೆ. ಈ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದು, ಶಿವರಾಜ್‍ಕುಮಾರ್ ಅವರಿಗೆ ನಟಿ ಪ್ರೇಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

 

Click to comment

Leave a Reply

Your email address will not be published. Required fields are marked *