ನವದೆಹಲಿ: ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಭಾರತದಿಂದ ಕೆಲವು ಜಾಗತಿಕ ಬ್ರ್ಯಾಂಡ್‍ಗಳು ದೂರವಾಗುತ್ತಿರುವ ಹಿನ್ನೆಲೆ ರಾಹುಲ್ ಅವರು ಪ್ರಧಾನಿ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ಧಾಳಿ ಮಾಡಿದ್ದಾರೆ. ಈ ವೇಳೆ ಅವರು, ಪ್ರಧಾನಿ ಅವರು ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ
Advertisement
ರಾಹುಲ್ ಟ್ವೀಟ್‍ನಲ್ಲಿ, 7 ಜಾಗತಿಕ ಬ್ರ್ಯಾಂಡ್‍ಗಳು, 9 ಕಾರ್ಖಾನೆಗಳು, 649 ಡೀಲರ್‌ಶಿಪ್‍ಗಳು, 84,000 ಉದ್ಯೋಗಗಳು ಭಾರತದಿಂದ ಹೋಗಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
Advertisement
The ease of driving business out of India.
❌ 7 Global Brands
❌ 9 Factories
❌ 649 Dealerships
❌ 84,000 Jobs
Modi ji, Hate-in-India and Make-in-India can’t coexist!
Time to focus on India's devastating unemployment crisis instead. pic.twitter.com/uXSOll4ndD
— Rahul Gandhi (@RahulGandhi) April 27, 2022
Advertisement
ಈ ಕುರಿತು ವಿವರಿಸಿದ ಅವರು, 2017 ರಲ್ಲಿ ಷೆವರ್ಲೆ, 2018 ರಲ್ಲಿ ಮ್ಯಾನ್ ಟ್ರಕ್ಸ್, 2019 ರಲ್ಲಿ ಫಿಯೆಟ್ ಮತ್ತು ಯುನೈಟೆಡ್ ಮೋಟಾರ್ಸ್, 2020 ರಲ್ಲಿ ಹಾರ್ಲೆ ಡೇವಿಡ್ಸನ್, 2021 ರಲ್ಲಿ ಫೋರ್ಡ್ ಮತ್ತು 2022 ರಲ್ಲಿ ಡಟ್ಸನ್ ನಮ್ಮ ಭಾರತದ ಮಾರುಕಟ್ಟೆಯಿಂದ ದೂರ ಸರಿದಿರುವ ಏಳು ಜಾಗತಿಕ ಬ್ರ್ಯಾಂಡ್‍ಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ಮೋದಿ ಅವರು ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ ಇವು ಯಶಸ್ವಿಯಾಗಲೂ ಸಾಧ್ಯವಾಗುವುದಿಲ್ಲ. ಇದರ ಬದಲು ಭಾರತದಲ್ಲಿ ನಿರುದ್ಯೋಗ ಬಿಕ್ಕಟ್ಟಿದೆ. ಇದರ ಕಡೆ ಹೆಚ್ಚು ಸಮಯವನ್ನು ಕೇಂದ್ರೀಕರಿಸಬೇಕು ಎಂದು ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ
ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್, ಆಡಳಿತ ಪಕ್ಷದ ವಿರೋಧ ಕಿಡಿಕಾರುತ್ತಿದೆ.