– ಸಂಚಾರಿ ಪೊಲೀಸರ ವಿರುದ್ಧ ಆರೋಪ
ಹಾಸನ: ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ಅಪಘಾತದಲ್ಲಿ ಸಾವನ್ನಪ್ಪಿದ್ದು, ಈ ಸಾವಿಗೆ ಸಂಚಾರಿ ಪೊಲೀಸರೇ ಕಾರಣ ಎಂದು ಅವರ ವಿರುದ್ಧ ವಕೀಲರು ಧಿಕ್ಕಾರ ಕೂಗಿ ಪ್ರತಿಭಟಿಸಿದ ಘಟನೆ ಹಾಸನದಲ್ಲಿ ನಡೆದಿದೆ.
Advertisement
ಹಾಸನದ ಎನ್.ಆರ್.ವೃತ್ತದಲ್ಲಿ ಲಾರಿ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ನಜೀರ್ ಅಹಮದ್ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಸಂಚಾರಿ ಪೊಲೀಸರ ಕರ್ತವ್ಯ ಲೋಪವೇ ಕಾರಣ ಎಂದು ಆರೋಪಿಸಿ ವಕೀಲರು ದಿಢೀರ್ ರಸ್ತೆ ತಡೆ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಜನರ ಬಳಿ ಸುಲಿಗೆ ಮಾಡ್ಕೊಂಡು ನಿಂತಿದ್ದೀರಾ?- ಅಧಿಕಾರಿಗಳಿಗೆ ರವೀಂದ್ರ ಶ್ರೀಕಂಠಯ್ಯ ಕ್ಲಾಸ್
Advertisement
Advertisement
ಘಟನೆಯನ್ನು ಖಂಡಿಸಿ ಎನ್.ಆರ್.ವೃತ್ತದಲ್ಲಿ ವಕೀಲರು ಸಂಚಾರಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪೊಲೀಸರು ಬಡ ರೈತರ ಬಳಿ ಲಂಚ ವಸೂಲಿ ಮಾಡುವುದರಲ್ಲಿ ನಿರತರಾಗಿದ್ದರು. ಆದರೆ ಅವರು ಸರಿಯಾಗಿ ಕರ್ತವ್ಯವನ್ನು ಮಾತ್ರ ನಿಭಾಯಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪರಿಣಾಮ ಪೊಲೀಸರು ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಫೀಲ್ಡಿಗಿಳಿದ ಪೊಲೀಸರು – ವೀಲಿಂಗ್ ಪುಂಡರು ಅಂದರ್