ಹಾಸನ: ಶುಗರ್ ಹಾಗೂ ಬಿಪಿ ಮಾತ್ರೆಯಲ್ಲೂ ಮನುಷ್ಯನಿಗೆ ಮಾರಕವಾಗುವ ಪ್ಲಾಸ್ಟಿಕ್ ಅಂಶ ಇದೆ ಎಂದು ಮಹಿಳಾ ರೋಗಿಯೊಬ್ಬರು ಆರೋಪ ಮಾಡುತ್ತಿದ್ದು, ಮಾತ್ರೆಗಳ ಕ್ವಾಲಿಟಿ ಬಗ್ಗೆ ಆತಂಕ ಮೂಡಿಸಿದೆ.
ಶುಗರ್ ಕಾಯಿಲೆ ಹೊಂದಿರುವ ಸಕೀನ ಎಂಬ ಮಹಿಳೆಯೊಬ್ಬರು, ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಮೆಡಿಕಲ್ ಶಾಪ್ ಒಂದರಲ್ಲಿ ಮಾತ್ರೆ ಖರೀದಿ ಮಾಡಿದ್ದರು. ಆದರೆ ಆ ಮಾತ್ರೆ ನುಂಗಿದ ನಂತರ ಮಹಿಳೆ ಆರೋಗ್ಯದಲ್ಲಿ ಪದೇ ಪದೇ ವ್ಯತ್ಯಯ ಆಗುತ್ತಿತ್ತು.
Advertisement
Advertisement
ಹೀಗಾಗಿ ಮಹಿಳೆ ಮಾತ್ರೆಯನ್ನು ನೀರಿನಲ್ಲಿ ನೆನೆಸಿ ಟೆಸ್ಟ್ ಮಾಡಿದ್ದಾರೆ. ಆದರೆ ಎಷ್ಟು ನೆನೆಸಿದರೂ ನೀರಿನಲ್ಲಿ ಮಾತ್ರೆ ಕರಗದೇ ಇದ್ದಿದ್ರಿಂದ ಕಂಗಾಲಾದ ಮಹಿಳಾ ರೋಗಿ ಮಾತ್ರೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದು, ಒಂದು ವೇಳೆ ಮಾತ್ರೆಯಲ್ಲಿ ಮಾರಕ ಪ್ಲಾಸ್ಟಿಕ್ ಅಂಶ ಪತ್ತೆಯಾದರೆ ಅದನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.