ಹಾಸನ: ಬೆಂಗಳೂರು ಬಳಿಕ ಮಾರಕ ಡೆಂಗ್ಯೂ ಜ್ವರಕ್ಕೆ (Dengue Fever) ಹಾಸನದಲ್ಲೊಂದು ಜೀವ ಬಲಿಯಾಗಿದೆ. 13 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ಹಾಸನ ತಾಲೂಕಿನ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಕ್ಷತಾ (13) ಮೃತ ಬಾಲಕಿ. ಅಕ್ಷತಾ ಮೂಲತಃ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದವರು. ಕೂಲಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿ ಪುತ್ರಿ ಅಕ್ಷತಾ, ಹಾಸನದ ಖಾಸಗಿ ಶಾಲೆಯಲ್ಲಿ (Hassan Private School) 7ನೇ ತರಗತಿ ಓದುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿ
Advertisement
Advertisement
ಕಳೆದ ಬುಧವಾರ ಜ್ವರಕ್ಕೆ ತುತ್ತಾಗಿದ್ದರು. ನಂತರ ಬಾಲಕಿಗೆ ಬೊಮ್ಮನಾಯಕಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದಾಗ್ಯೂ ಬಾಲಕಿ ಗುಣಮುಖಳಾಗದೇ ಇದ್ದ ಕಾರಣ ಪೋಷಕರು ಆಕೆಯನ್ನ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಅಕ್ಷತಾ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದರು.
Advertisement
Advertisement
ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗುವಂತೆ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ನಂತರ ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರ ಕಡೆಗಣನೆ ಕಾರಣ: ಡಿವಿಎಸ್